ಕರ್ನಾಟಕ

karnataka

ETV Bharat / state

Hassan crime: ಮದ್ಯ ಸೇವಿಸಿದ ವಿಷಯವನ್ನು ತಂದೆಗೆ ತಿಳಿಸಿದ ಸ್ನೇಹಿತನ ಕೊಲೆ; ಇಬ್ಬರು ಸೆರೆ - ಇಬ್ಬರು ಆರೋಪಿಗಳ ಬಂಧನ

Hassan crime: ಮದ್ಯ ಸೇವನೆ ಮಾಡಿರುವ ವಿಷಯವನ್ನು ತಂದೆಗೆ ತಿಳಿಸಿರುವುದಕ್ಕೆ ಕೋಪಗೊಂಡು ಸ್ನೇಹಿತನನ್ನೇ ಇಬ್ಬರು ಯುವಕರು ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ಇತ್ತೀಚೆಗೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Two young men who murdered a friend
ಮದ್ಯ ಸೇವಿಸಿರುವ ವಿಷಯವನ್ನು ತಂದೆಗೆ ತಿಳಿಸಿದ್ದ ಸ್ನೇಹಿತನ ಕೊಲೆ..!

By

Published : Aug 8, 2023, 6:28 PM IST

Updated : Aug 9, 2023, 5:33 PM IST

ಎಸ್ಪಿ ಹರಿರಾಮ್ ಶಂಕರ್ ಮಾಹಿತಿ

ಹಾಸನ:ಮದ್ಯ ಸೇವನೆ ಮಾಡಿರುವ ಸಂಗತಿಯನ್ನು ತಂದೆಗೆ ಹೇಳಿರುವುದಕ್ಕೆ ಆಕ್ರೋಶಗೊಂಡು ತನ್ನ ಸ್ನೇಹಿತನನ್ನೇ ಇಬ್ಬರು ಯುವಕರು ಹತ್ಯೆಗೈದಿರುವ ಘಟನೆ ಹಾಸನದಲ್ಲಿ ಕಳೆದ ಜು.31 ರಂದು ನಡೆದಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ್ (32) ಕೊಲೆಯಾದ ದುರ್ದೈವಿ. ಪುನೀತ್ ಮತ್ತು ಯಶವಂತ್ ಕೊಲೆ ಆರೋಪಿಗಳು ಎಂದು ಮಾಹಿತಿ ನೀಡಿದರು.

ಪ್ರಕರಣದ ವಿವರ:ಹಾಸನ ತಾಲೂಕಿನ ಚಿಕ್ಕಗೆಣಿಗೆರೆ ಗ್ರಾಮದಲ್ಲಿ ಕೊಲೆಯಾದ ಪ್ರಕಾಶ್, ಆರೋಪಿಗಳಾದ ಪುನೀತ್, ಯಶವಂತ್ ಎಂಬ ಮೂವರು ಸ್ನೇಹಿತರು ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಪುನೀತ್ ತಂದೆಗೆ ಕರೆ ಮಾಡಿ ನನ್ನ ಮಗ ಎಲ್ಲಿದ್ದಾನಪ್ಪ ಎಂದು ಕೇಳಿದ್ದಾರೆ. ಆಗ ಕುಡಿದ ಮತ್ತಿನಲ್ಲಿ ಪ್ರಕಾಶ್, ನಿಮ್ಮ ಮಗ ಮದ್ಯ ಸೇವಿಸುತ್ತಿದ್ದಾನೆ ಎಂದು ಪುನೀತ್ ಎಂಬವರ ತಂದೆಗೆ ಮಾಹಿತಿ ನೀಡಿದ್ದಾನೆ.

ಇದರಿಂದ ಪುನೀತ್ ತಂದೆ ಕೋಪಗೊಂಡಿದ್ದರು. ಮದ್ಯಪಾನ ಮಾಡಿ ಮನೆಗೆ ಬಂದ ಪುನೀತ್​ನನ್ನು ತಂದೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಪುನೀತ್ ವಿಚಾರವನ್ನು ಸ್ನೇಹಿತ ಯಶವಂತ್​ಗೆ ತಿಳಿಸಿದ್ದಾನೆ. ಬಳಿಕ ಇಬ್ಬರೂ, ಸ್ನೇಹಿತ ಪ್ರಕಾಶ್‌ನನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಗಂಭೀರವಾಗಿ ಹಲ್ಲೆ ಮಾಡಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್​ನನ್ನು ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪ್ರಕರಣದ ಕುರಿತು ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆದ್ರೆ, ಚಿಕಿತ್ಸೆಗೆ ಸ್ಪಂದಿಸದೇ ಪ್ರಕಾಶ್ ಸಾವನ್ನಪ್ಪಿದ್ದನು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ವಿವರ ನೀಡಿದರು.

ಇತ್ತೀಚಿನ ಪ್ರಕರಣ: ಚಾಕುವಿನಿಂದ ಇರಿದು ಸ್ನೇಹಿತನ ಹತ್ಯೆ:ಸ್ನೇಹಿತನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಭಾನುವಾರ (ಆ.6ಕ್ಕೆ) ನಡೆದಿತ್ತು. ಕೀಲಾರ ಗ್ರಾಮದ ಜಯಂತ್(23) ಪ್ರಾಣ ಕಳೆದುಕೊಂಡ ಯುವಕ. ಈತನ ಗೆಳೆಯ ಕೀರ್ತಿ ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದರು.

ಜಯಂತ್ ಮತ್ತು ಕೀರ್ತಿ ನಡುವೆ ಗ್ರಾಮದ ವರ್ಕ್‌ಶಾಪ್‌ ಹತ್ತಿರ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಇದು ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದರು. ಆಕ್ರೋಶಗೊಂಡ ಕೀರ್ತಿ ಚಾಕುವಿನಿಂದ ಜಯಂತ್​​ಗೆ ಚಾಕುವಿನಿಂದ ಇರಿದಿದ್ದನು. ಜಯಂತ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದನು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:Davanagere crime: ಸಾಲ ಮರಳಿ ಕೇಳಿದ್ದಕ್ಕೆ ದಾವಣಗೆರೆಯಲ್ಲಿ ವ್ಯಕ್ತಿ ಕೊಲೆ; ಆರೋಪಿ ಸೆರೆ

Last Updated : Aug 9, 2023, 5:33 PM IST

ABOUT THE AUTHOR

...view details