ಹಾಸನ : ಜಿಲ್ಲೆಯಲ್ಲಿ ಇಂದು 159 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಇಂದು ಆಲೂರು ತಾಲೂಕಿನಲ್ಲಿ 2, ಹಾಸನದಲ್ಲಿ 103, ಅರಸೀಕೆರೆಯಲ್ಲಿ 10, ಚನ್ನರಾಯಪಟ್ಟಣದಲ್ಲಿ 11, ಅರಕಲಗೂಡಿನಲ್ಲಿ 11, ಹೊಳೇನರಸೀಪುರದಲ್ಲಿ 13, ಸಕಲೇಶಪುರ 9 ಸೇರಿ ಒಟ್ಟು 159 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದುವರೆ ಜಿಲ್ಲೆಯಲ್ಲಿ ಒಟ್ಟು 3,031 ಪ್ರಕರಣಗಳು ದಾಖಲಾಗಿವೆ. ಇಂದು 34 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 1,224 ಮಂದಿ ಗುಣಮುಖರಾಗಿದ್ದಾರೆ. ಸದ್ಯ, 1,728 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 79 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದರು.