ಹಾಸನ: ಜಿಲ್ಲೆಯಲ್ಲಿ ಇಂದು 4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದರು.
ಹಾಸನದಲ್ಲಿ 3, ಚನ್ನರಾಯಪಟ್ಟಣದಲ್ಲಿ 1 ಸೇರಿ ಒಟ್ಟು 4 ಪ್ರಕರಣಗಳು ವರದಿಯಾಗಿವೆ. ಹಾಸನದ 48 ವರ್ಷದ ಪುರುಷ ಮೃತಪಟ್ಟಿದ್ದು, ಎರಡು ವರ್ಷದಿಂದ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 10 ರಂದು ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದರು.
ಇದುವರೆಗೂ 715 ಪ್ರಕರಣಗಳು ವರದಿಯಾಗಿದ್ದು, ಚಿಕಿತ್ಸೆ ಪಡೆದು 472 ಜನರು ಗುಣಮುಖರಾಗಿದ್ದಾರೆ. 221 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ 22 ಜನ ಸಾವನಪ್ಪಿದ್ದಾರೆ ಎಂದರು.
ಜಿಲ್ಲೆಯ ತಾಲ್ಲೂಕಾವಾರು ಕೋವಿಡ್ ಪ್ರಕರಣಗಳು:
1. ಆಲೂರು-31
2. ಅರಕಲಗೂಡು-28