ಹಾಸನ: ನಗರದ ಬಿ.ಎಂ. ರಸ್ತೆಯ ಬಂದಿಖಾನೆಯುದ್ದಕ್ಕೂ ಕಬ್ಬಿಣದ ಗ್ರಿಲ್ ಅಳವಡಿಕೆ ಮಾಡಲಾಗಿದ್ದು, ಅಜಾದ್ ರಸ್ತೆ ಮತ್ತು ಗುಂಡಿ ರಸ್ತೆಗೆ ಸಂಪರ್ಕಿಸುವ ಮಧ್ಯೆ ಓಡಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಸ್ತರು ರಸ್ತೆ ಮಧ್ಯೆ ನಿಂತು ಮೌನ ಪ್ರತಿಭಟಿನೆ ನಡಸಿ ಮನವಿ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಬಿ.ಎಂ. ರಸ್ತೆ, ಬಂದಿಖಾನೆ ಹಾಗೂ ಸಂತೇಪೇಟೆ ವೃತ್ತದ ಉದ್ದಕ್ಕೂ ಇರುವ ಡಿವೈಡರ್ಗೆ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಆದರೆ ಕೆಲ ಮುಖ್ಯ ಅಡ್ಡ ರಸ್ತೆ ಸಂಪರ್ಕಿಸುವ ಕಡೆ ಓಡಾಡಲು ಜಾಗ ಬಿಡದೆ ಕಬ್ಬಿಣ ಅಳವಡಿಸಿರುವುದು ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ಇದರಿಂದಾಗಿ ಶಾಲಾ ಮಕ್ಕಳು ಕಿಲೋ ಮೀಟರ್ ಬಳಸಿಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆ.