ಕರ್ನಾಟಕ

karnataka

ETV Bharat / state

ಚಿನ್ನ ಲೇಪಿತ ಮೋದಿ ಪ್ರತಿಮೆ ತಯಾರಿಸಿ ಗಮನ ಸೆಳೆದ ಹಾಸನದ ಕಲಾವಿದ - Hassan

ನರೇಂದ್ರ ಅವರು ಕಳೆದ ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಚಿನ್ನದ ಆಭರಣಗಳನ್ನು ತರಿಸುವ ಸಂದರ್ಭದಲ್ಲಿ ಬೇಕಾಗುವಂತಹ ಎಂ.ಸೀಲ್ ಆಮದು ಮಾಡಿಕೊಂಡಿದ್ದರು. ಅದರಿಂದ ಮೋದಿ ಪ್ರತಿಮೆಯನ್ನು ನಿರ್ಮಾಣ ಮಾಡಿ ಹುಟ್ಟುಹಬ್ಬಕ್ಕೆ ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ..

Hassan
ಮೋದಿ ಪ್ರತಿಮೆ ತಯಾರು ಮಾಡಿದ ಹಾಸನದ ಕಲಾವಿದ

By

Published : Sep 17, 2021, 10:28 PM IST

ಹಾಸನ : ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 71ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಇಲ್ಲೊಬ್ಬ ಅಭಿಮಾನಿ ವಿಭಿನ್ನ ರೀತಿಯಾಗಿ ಬರ್ತ್‌ಡೇ ಉಡುಗೊರೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಮೋದಿ ಪ್ರತಿಮೆ ತಯಾರು ಮಾಡಿದ ಹಾಸನದ ಕಲಾವಿದ..

ಇವರ ಹೆಸರು ನರೇಂದ್ರ. ಚಿನ್ನದ ಕೆಲಸಗಾರರಾಗಿರುವ ಇವರು ಮೋದಿಯವರ ಕಟ್ಟಾ ಅಭಿಮಾನಿ. ಹಿಂದೆ ವಿಶ್ವಕಪ್ ಸಂದರ್ಭದಲ್ಲಿ ಕೇವಲ 200 ಮಿಲಿ ಗ್ರಾಂನಲ್ಲಿ ವಿಶ್ವಕಪ್ ಟ್ರೋಫಿ ಮಾಡಿ, ಕ್ರಿಕೆಟ್ ಆಟಗಾರರ ಗಮನ ಸೆಳೆದಿದ್ದರು. ಅಲ್ಲದೇ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಚಿನ್ನದ ಲೇಪಿತ 5 ಅಡಿ 4 ಇಂಚು ಉದ್ದದ ಮೋದಿ ಪ್ರತಿಮೆ ನಿರ್ಮಾಣ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ನರೇಂದ್ರ ಅವರು ಕಳೆದ ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಚಿನ್ನದ ಆಭರಣಗಳನ್ನು ತರಿಸುವ ಸಂದರ್ಭದಲ್ಲಿ ಬೇಕಾಗುವಂತಹ ಎಂ.ಸೀಲ್ ಆಮದು ಮಾಡಿಕೊಂಡಿದ್ದರು. ಅದರಿಂದ ಮೋದಿ ಪ್ರತಿಮೆಯನ್ನು ನಿರ್ಮಾಣ ಮಾಡಿ ಹುಟ್ಟುಹಬ್ಬಕ್ಕೆ ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ.

ಚಿನ್ನಲೇಪಿತ ಮೋದಿ ಪ್ರತಿಮೆ ತಯಾರಿಸಿ ಗಮನ ಸೆಳೆದ ಹಾಸನದ ಕಲಾವಿದ

ನಗರದ ಎಂಜಿ ರಸ್ತೆಯಲ್ಲಿರುವ ಬಿಜೆಪಿಯ ಮಾಧ್ಯಮ ಪ್ರಮುಖ್ ಕಚೇರಿಯ ಮುಂಭಾಗದಲ್ಲಿ ನರೇಂದ್ರ ಅವರು ನಿರ್ಮಾಣ ಮಾಡಿರುವ ಚಿನ್ನ ಲೇಪಿತ ಮೋದಿಯವರ ಸಣ್ಣ ಪ್ರತಿಮೆಯನ್ನು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ವಿಜಯಕುಮಾರ್ ಅನಾವರಣಗೊಳಿಸಿ, ಮೋದಿಯವರ ಹುಟ್ಟುಹಬ್ಬವನ್ನು ಆಚರಿಸಿದರು.

ಕಲಾವಿದ ನರೇಂದ್ರ ಅವರು ಕೊರೊನಾ ಸಂದರ್ಭದಲ್ಲಿ, ಫ್ರಂಟ್‌ಲೈನ್ ವಾರಿಯರ್ಸ್‌ಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ ಚಿನ್ನ ಮತ್ತು ಬೆಳ್ಳಿ ಬಳಸಿ ಅವರವರ ವೃತ್ತಿಯಲ್ಲಿ ಬಳಸುವಂತಹ ವಸ್ತುಗಳನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿದ್ದರು.

ABOUT THE AUTHOR

...view details