ಕರ್ನಾಟಕ

karnataka

ETV Bharat / state

'ಶಿವಮೊಗ್ಗ- ವಿಜಯಪುರ ಮಾದರಿಯಲ್ಲಿಯೇ ಹಾಸನ ವಿಮಾನ ನಿಲ್ದಾಣ ಆಗಬೇಕು' - revanna talk about hassan airport construction

ಬಿ. ಎಸ್. ಯಡಿಯೂರಪ್ಪ ಡಿನೋಟಿಫಿಕೇಶನ್ ಮಾಡುವುದರಲ್ಲಿ ಎಕ್ಸ್​ಪರ್ಟ್ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಆರೋಪಿಸಿದ್ದಾರೆ.

h-d-revanna
ಮಾಜಿ ಸಚಿವ ಹೆಚ್. ಡಿ. ರೇವಣ್ಣ

By

Published : Jul 2, 2021, 11:10 PM IST

ಹಾಸನ: ಏರ್​ಪೋರ್ಟ್​ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ. ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಯಲ್ಲಿ ಇರುವಂತಹ ಮಾದರಿಯಲ್ಲಿಯೇ ಹಾಸನದಲ್ಲಿ ನಿರ್ಮಾಣವಾಗಬೇಕು. ಇಲ್ಲವಾದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಅಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಸನ ವಿಮಾನ ನಿಲ್ದಾಣಕ್ಕೆ ಇನ್ನೂ 219 ಎಕರೆ ಭೂಮಿ ಬೇಕಾಗಿದೆ. ಶಿವಮೊಗ್ಗ ಮತ್ತು ಬಿಜಾಪುರದ ಮಾದರಿಯಲ್ಲಿಯೇ ಹಾಸನದ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು. ಇಲ್ಲವಾದರೆ ನಾನು ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿ. ಎಸ್. ಯಡಿಯೂರಪ್ಪ ಡಿನೋಟಿಫಿಕೇಶನ್ ಮಾಡುವುದರಲ್ಲಿ ಎಕ್ಸ್​ಪರ್ಟ್​. ಸುಳ್ಳು ಮತ್ತು ರಾಜಕೀಯ ದ್ವೇಷ ಮಾಡುವ ಸಿಎಂ ಯಡಿಯೂರಪ್ಪ ಮೊದಲು ಇಂತಹ ಕೀಳು ಮಟ್ಟದ ರಾಜಕೀಯವನ್ನು ಬಿಡಬೇಕು. ಇಂತಹ ಸರ್ಕಾರಕ್ಕೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ. ಜಿಲ್ಲೆಯಲ್ಲಿ ಕಾಮಗಾರಿಗಳಿಗೆ ಈಗಾಗಲೇ ಸರ್ಕಾರ ತಡೆಹಿಡಿದಿದೆ. ಈ ಮೂಲಕ ಹಾಸನದ ಅಭಿವೃದ್ಧಿಗೆ ಈಗಿನ ಸರ್ಕಾರ ಕಂಟಕಪ್ರಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. .

ಓದಿ:ಇಬ್ಬರು ಐಎಎಸ್ ಅಧಿಕಾರಿಗಳಿಗೆ ಪ್ರಭಾರ ಹುದ್ದೆ ವಹಿಸಿ ಸರ್ಕಾರ ಆದೇಶ

ABOUT THE AUTHOR

...view details