ಕರ್ನಾಟಕ

karnataka

ETV Bharat / state

'ಪ್ಲೀಸ್ ನಮ್ಮನ್ನ ಬಿಡಿ...' ಹಾಸನದಲ್ಲಿ ಅನ್ಯಕೋಮಿನ ಯುವಕ, ಯುವತಿಗೆ ಥಳಿಸಿದ ಗುಂಪು - hassan video viral

ಮೂರ್ನಾಲ್ಕು ಜನರ ಗುಂಪೊಂದು ಯುವಕ, ಯುವತಿಗೆ ನಿಂದಿಸಿ ಥಳಿಸಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

beat in hassan
ಯುವಕ, ಯುವತಿಗೆ ಥಳಿಸಿದ ಗುಂಪು

By

Published : Dec 25, 2019, 10:17 AM IST

Updated : Dec 25, 2019, 3:01 PM IST

ಹಾಸನ: ಪ್ರೀತಿಸುತ್ತಿದ್ದಾರೆ ಎಂದು ಅನ್ಯಕೋಮಿನ ಯುವಕ, ಯುವತಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಮಲಗದೇ ಗ್ರಾಮದ ಯುವಕನಿಗೆ ಮೂರ್ನಾಲ್ಕು ಜನರ ಗುಂಪು ನಿಂದಿಸಿ ಮನಬಂದಂತೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ನಾವು ಯಾವುದೇ ತಪ್ಪು ಮಾಡಿಲ್ಲವೆಂದರೂ ಯುವತಿಗೂ ನಿಂದಿಸಿ ಹೊಡೆದಿರುವುದು ವಿಡಿಯೋದಲ್ಲಿದೆ.

ಯುವಕ, ಯುವತಿಗೆ ಥಳಿತ

ಈ ಘಟನೆ ನಗರದ‌ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ವಿಡಿಯೋ ನೋಡಿ ದೂರು ದಾಖಲಿಸಿಕೊಂಡಿದ್ದೆವು. ಬಳಿಕ ಹಲ್ಲೆಗೊಳಗಾದ ಯುವಕ ಕೂಡ ದೂರು ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಎಎಸ್ಪಿ ನಂದಿನಿ ತಿಳಿಸಿದ್ದಾರೆ.

Last Updated : Dec 25, 2019, 3:01 PM IST

ABOUT THE AUTHOR

...view details