ಕರ್ನಾಟಕ

karnataka

ETV Bharat / state

ಅ. 8ರ ಮೀಸಲಾತಿ ಪಟ್ಟಿ ಸರಿ ಎಂದು ನ್ಯಾಯಾಲಯ ಆದೇಶ... ಜೆಡಿಎಸ್​​​ಗೆ ಹಿನ್ನಡೆ - insult to JDS

ಅಧಿಕಾರವನ್ನು ಹಿಡಿಯಲು ಬಿಜೆಪಿ ವಾಮಮಾರ್ಗವನ್ನ ಹಿಡಿದಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ಜೆಡಿಎಸ್ ನ್ಯಾಯಾಲಯಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆದ್ರೆ ನ್ಯಾಯಾಲಯ ಅ. 8ರ ಮೀಸಲಾತಿ ಪಟ್ಟಿ ಸರಿಯಾಗಿದೆ. ಇದು ಅಂತಿಮ. ಇದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಪುನರುಚ್ಚಾರ ಮಾಡಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.

Hassa: Highcourt order set JDS insult
ಅ. 8 ಮೀಸಲಾತಿ ಪಟ್ಟಿ ಸರಿ ಎಂದು ನ್ಯಾಯಾಲಯ ಆದೇಶ...ಜೆಡಿಎಸ್​ ಗೆ ಮುಖಭಂಗ

By

Published : Oct 22, 2020, 8:18 AM IST

ಅರಸೀಕೆರೆ(ಹಾಸನ):ಅರಸೀಕೆರೆ ನಗರಸಭೆ ಬಿಜೆಪಿ ಪಾಲಾಯ್ತು ಎನ್ನುವಷ್ಟರಲ್ಲಿ ಅ. 15ರಂದು ನ್ಯಾಯಾಲಯದ ಮೊರೆ ಹೋಗಿದ್ದ ಜೆಡಿಎಸ್​​ಗೆ ಹೈಕೋರ್ಟ್​ನ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದ್ರೆ ನ್ಯಾಯಾಲಯ ಅ. 8ರ ಮೀಸಲಾತಿ ಪಟ್ಟಿ ಸರಿಯಾಗಿದೆ. ಇದು ಅಂತಿಮ. ಇದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಪುನರುಚ್ಚಾರ ಮಾಡಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.

ಅಕ್ಟೋಬರ್ 8ರಂದು ನಗರಸಭೆಯ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, 52ನೇ ಸ್ಥಾನದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಕಟಿಸುವ ಮೂಲಕ ಇತರ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಜೆಡಿಎಸ್ ಪಕ್ಷದ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಹಾಸನದ ಉಪ ವಿಭಾಗಾಧಿಕಾರಿ ಕಚೇರಿಯಿಂದ ಅ. 22ರಂದು ಅಂದ್ರೆ ಇಂದು ಅರಸೀಕೆರೆಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಉಪ ವಿಭಾಗಾಧಿಕಾರಿ, ಶಾಸಕ ಶಿವಲಿಂಗೇಗೌಡರಿಗೆ ಪತ್ರದ ಮೂಲಕ ತಿಳಿಸಿದ್ದರು.

ಅಧಿಕಾರವನ್ನು ಹಿಡಿಯಲು ಬಿಜೆಪಿ ವಾಮಮಾರ್ಗವನ್ನ ಹಿಡಿದಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ಜೆಡಿಎಸ್ ನ್ಯಾಯಾಲಯಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಮೀಸಲಾತಿ ಪರಿಶೀಲನೆಗೆ ಧ್ಯಾನ್ ಚಿನ್ನಪ್ಪ, ಹಿರಿಯ ವಕೀಲ ಎಸ್.ಪೊನ್ನಣ್ಣ, ರಾಜ್ಯ ಚುನಾವಣಾ ಆಯೋಗದ ಹಿರಿಯ ವಕೀಲ ಫಣೀಂದ್ರ ಮೂವರು ಸದಸ್ಯರನ್ನೊಳಗೊಂಡ ಸಮಿತಿ ಹಾಸನ ಮತ್ತು ಅರಸೀಕೆರೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಗೆ ತಾತ್ಕಾಲಿಕ ತಡೆ ನೀಡಿತ್ತು.

ಬೆಂಗಳೂರಿನ ನ್ಯಾಯಾಲಯದಲ್ಲಿ ನೀಡಿದ ತಡೆಯಿಂದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಅರಸೀಕೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದರು. ಆದರೆ ಅ. 8ರ ಆದೇಶವನ್ನೇ ನ್ಯಾಯಾಲಯ ಮತ್ತೊಮ್ಮೆ ಸರಿ ಇದೆ ಎನ್ನುವ ಮೂಲಕ ಜೆಡಿಎಸ್ ಪಕ್ಷಕ್ಕೆ ಚಾಟಿ ಬೀಸಿದೆ. ಅಲ್ಲದೆ ನ. 2ರ ಒಳಗೆ ಚುನಾವಣೆ ನಡೆಸಬೇಕು ಅಂತ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ, ನೀವು ಕೈಗೊಳ್ಳುವ ಎಲ್ಲಾ ಕ್ರಮಗಳನ್ನು ಪ್ರತಿನಿತ್ಯ ನಗರಾಭಿವೃದ್ಧಿ ಇಲಾಖೆಗೆ ವರದಿ ಒಪ್ಪಿಸಬೇಕು ಎಂದು ಸೂಚನೆ ನೀಡಿದೆ.

ಇದರಿಂದ ಮೊದಲ ಬಾರಿಗೆ ನಗರಸಭೆಯ ಅಧ್ಯಕ್ಷ ಗಾದಿ ಹಿಡಿಯಲು ಹೊರಟಿದ್ದ ಬಿಜೆಪಿಗೆ ಮತ್ತೊಮ್ಮೆ ರಿಲೀಫ್ ಸಿಕ್ಕಿದಂತಾಗಿದೆ. ಆದೇಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಅರಸೀಕೆರೆ ನಗರಸಭೆಯ ಕೆಲ ಸದಸ್ಯರು ಪಟ್ಟಣದ ಪಿಪಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಆದರೆ ಮುಂದೆ ಜೆಡಿಎಸ್ ಪಕ್ಷ ಮತ್ತೆ ಯಾವುದಾದರೂ ಹೊಸ ತಂತ್ರ ರೂಪಿಸುತ್ತಾ ಕಾದು ನೋಡಬೇಕಿದೆ.

ABOUT THE AUTHOR

...view details