ಹಾಸನಾಂಬೆ ದರ್ಶನಕ್ಕೆ ತೆರೆ: ಜಿಲ್ಲಾಡಳಿತಕ್ಕೆ ಸಚಿವ ಮಾಧುಸ್ವಾಮಿ ಅಭಿನಂದನೆ - ಹಾಸನದ ಹಾಸನಾಂಬೆ ದೇವಾಲಯ
ಹಾಸನಾಂಬೆಯ ದರ್ಶನಕ್ಕೆ ತೆರೆ ಬಿದ್ದಿದ್ದು, ಹಾಸನಾಂಬೆಯ ದರ್ಶನೋತ್ಸವ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾಡಳಿತ ಸಮ್ಮುಖದಲ್ಲಿ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನ ಮುಚ್ಚಲಾಗಿದೆ. ದರ್ಶನೋತ್ಸವದ ವೇಳೆ ಶ್ರಮಿಸಿದ ಜಿಲ್ಲಾಡಳಿತ ಹಾಗೂ ದೇವಾಲಯದ ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿನಂದನೆ ಸಲ್ಲಿಸಿದರು.
ಹಾಸನ: ಹಾಸನಾಂಬೆಯ ದರ್ಶನಕ್ಕೆ ತೆರೆ ಬಿದ್ದಿದ್ದು, ಹಾಸನಾಂಬೆಯ ದರ್ಶನೋತ್ಸವ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾಡಳಿತ ಸಮ್ಮುಖದಲ್ಲಿ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನ ಮುಚ್ಚಲಾಗಿದೆ. ದರ್ಶನೋತ್ಸವದ ವೇಳೆ ಶ್ರಮಿಸಿದ ಜಿಲ್ಲಾಡಳಿತ ಹಾಗೂ ದೇವಾಲಯದ ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿನಂದನೆ ಸಲ್ಲಿಸಿದರು. ನಾನು ಇದೇ ಮೊದಲ ಬಾರಿಗೆ ಹಾಸನಾಂಬೆಯ ದರ್ಶನ ಮಾಡಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಕ್ತರಿಗೆ ದರ್ಶನ ದೊರೆತಿದೆ ಎಂದರು. ಯಾವುದೇ ಗೊಂದಲವಿಲ್ಲದೆ ಉತ್ಸವ ಮುಕ್ತಾಯವಾಗಿದ್ದು, ಮುಂದೆಯೂ ಇದೇ ರೀತಿಯಾಗಿ ಉತ್ಸವ ನಡೆಯಲಿ ಎಂದರು.