ಹಾಸನ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಮಲೆನಾಡು ಭಾಗದಲ್ಲಿ ಮಾತ್ರ ಅಬ್ಬರಿಸುತ್ತಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.
ಜಲಾಶಯದಿಂದಲೂ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇದರಿಂದ ಅರಕಲಗೂಡು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. 1910ರಲ್ಲಿ ಮೈಸೂರಿನ ಒಡೆಯರು ನಿರ್ಮಾಣ ಮಾಡಿದ್ದ ಈ ಅಣೆಕಟ್ಟು 1961ರಲ್ಲಿ ಮೊದಲ ಬಾರಿಗೆ ತುಂಬಿದ್ದರಿಂದ ಕಾವೇರಿ ಮೈದುಂಬಿ ಹರಿದಿದ್ದು ಬಿಟ್ಟರೆ 57 ವರ್ಷಗಳ ಬಳಿಕ 2018ರಲ್ಲಿ ಮತ್ತು ಈ ಬಾರಿ ಮೈದುಂಬಿ ಪ್ರವಾಸಿ ತಾಣವಾಗುತ್ತಿದೆ.