ಹಾಸನ:ಗಂಡನ ಅನುಮಾನದ ಭೂತಕ್ಕೆ ಹೆಂಡತಿ ಬಲಿಯಾದ ಬೆನ್ನಲ್ಲೇ, ಮಗ ಕೊಲೆಗೈದ ವಿಷಯ ತಿಳಿದು ವಿಷ ಸೇವಿಸಿದ್ದ ತಾಯಿಯೂ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಘಟನೆ ನಡೆದಿದೆ.
ನ.17ರಂದು ಚನ್ನರಾಯಪಟ್ಟಣ ತಾಲೂಕಿನ ಕಾಚೇನಹಳ್ಳಿ ಗ್ರಾಮದಲ್ಲಿ ಗಂಗಾಧರ ಎಂಬಾತ ತನ್ನ ಪತ್ನಿ ಪೂಜಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಮಗ ಕೊಲೆ ಮಾಡಿರುವುದನ್ನು ತಿಳಿದು ಗಂಗಾಧರನ ತಾಯಿ ಜಯಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೀಟನಾಶಕ ಸೇವಿಸಿದ್ದ ಜಯಮ್ಮ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ.
ಇದನ್ನೂ ಓದಿ:ಪತ್ನಿ ಮೇಲೆ ಅನುಮಾನ: ಕೊಚ್ಚಿ ಕೊಂದು ಪತಿ ಪರಾರಿ