ಕರ್ನಾಟಕ

karnataka

ETV Bharat / state

ಪೊಲೀಸ್ ವೇಷದಲ್ಲಿ ಮನೆಗೆ ಬಂದು ಹಣ, ಚಿನ್ನಾಭರಣ ಎಗರಿಸಿ ಕಳ್ಳರು ಪರಾರಿ! - hasan robbery

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸೂರು ಗ್ರಾಮದ ಲವಣ್ಣಗೌಡ ಎಂಬುವರ ಮನೆಯಲ್ಲಿಈ ಘಟನೆ ನಡೆದಿದೆ. ಚಾಲಾಕಿ ಕಳ್ಳರು, ನಾವು ಪೊಲೀಸ್ರು ಎಂದು ನಂಬಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.

ಪೊಲೀಸ್ ವೇಷದಲ್ಲಿ ಮನೆಗೆ ಬಂದು ಹಣ, ಚಿನ್ನಾಭರಣ ಎಗರಿಸಿ ಕಳ್ಳರು ಪರಾರಿ!
ಪೊಲೀಸ್ ವೇಷದಲ್ಲಿ ಮನೆಗೆ ಬಂದು ಹಣ, ಚಿನ್ನಾಭರಣ ಎಗರಿಸಿ ಕಳ್ಳರು ಪರಾರಿ!

By

Published : Aug 19, 2020, 3:34 AM IST

Updated : Aug 19, 2020, 4:14 AM IST

ಹಾಸನ: ನಾವು ಪೊಲೀಸರು, ನಿಮ್ಮ ತಮ್ಮ ಬೆಂಗಳೂರನಲ್ಲಿ ಕಳ್ಳತನ ಮಾಡಿ ಹಣ ತಂದಿದ್ದಾನೆ. ನಿಮ್ಮ ಮನೆಯ ಹುಡುಕಾಟ ನಡೆಸಬೇಕು ಎಂದು ಮನೆಯವರನ್ನ ಪಡಸಾಲೆಯಲ್ಲಿ ಕೂರಿಸಿ, ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣವನ್ನ ಖದೀಮರು ದೋಚಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸೂರು ಗ್ರಾಮದ ಲವಣ್ಣಗೌಡ ಎಂಬುವರ ಮನೆಯಲ್ಲಿಈ ಘಟನೆ ನಡೆದಿದೆ. ಚಾಲಾಕಿ ಕಳ್ಳರು, ನಾವು ಪೊಲೀಸ್ರು ಎಂದು ನಂಬಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.

ಪೊಲೀಸ್ ವೇಷದಲ್ಲಿ ಮನೆಗೆ ಬಂದು ಹಣ, ಚಿನ್ನಾಭರಣ ಎಗರಿಸಿ ಕಳ್ಳರು ಪರಾರಿ!
ಏನಿದು ಪ್ರಕರಣ?: ಆ.17ರಂದು ರಾತ್ರಿ ಇನ್ನೋವಾ ಕಾರಿನಲ್ಲಿ ಬಂದ 4 ಮಂದಿ, ನಾವು ಪೊಲೀಸರು. ಬೆಂಗಳೂರಿನಿಂದ ಬಂದಿದ್ದೇವೆ. ನಿಮ್ಮ ತಮ್ಮ ಬೆಂಗಳೂರಲ್ಲಿ ಕಳ್ಳತನ ಮಾಡಿ ಹಣವನ್ನ ತಮ್ಮ ಮನೆಯಲ್ಲಿ ಬಚ್ಚಿಟ್ಟಿದ್ದಾನೆ. ನಾವು ಸರ್ಚ್ ಮಾಡಬೇಕು ಎಂದು ಲವಣ್ಣಗೌಡರನ್ನ ಮನೆಯ ಪಡಸಾಲೆಯಲ್ಲಿ ಕೂರಿಸಿ ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಸೇರಿದಂತೆ ಬೀರುವಿನಲ್ಲಿದ್ದ ಸ್ವಲ್ಪ ಹಣವನ್ನ ತಾವು ತಂದಿದ್ದ ಚೀಲದಲ್ಲಿ ತುಂಬಿಕೊಂಡು, ನಾಳೆ ಬೆಳಗ್ಗೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಬಂದು ವಿವರಣೆ ನೀಡಿ ಎಂದು ನಂಬಿಸಿ ಮನೆಯಲ್ಲಿದ್ದ ಸುಮಾರು 2ಲಕ್ಷಕ್ಕೂ ಅಧಿಕಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ. ಇನ್ನು ಮಂಗಳವಾರ ಲವಣ್ಣ, ಪೊಲೀಸ್ ಠಾಣೆಗೆ ಬಂದು ಈ ವಿಚಾರವನ್ನ ತಿಳಿಸಿದ್ದಾರೆ. ನಾವು ಯಾವ ಪೊಲೀಸರನ್ನ ನಿಮ್ಮ ಮನೆಗೆ ಕಳುಹಿಸಿಲ್ಲ. ಯಾರೋ ನಿಮಗೆ ಸರಿಯಾಗಿ ಯಾಮಾರಿಸಿದ್ದಾರೆ. ನಿಮ್ಮ ಸಹೋದರನಿಗೆ ಕರೆಮಾಡಿ ಎಂದು ಪೊಲೀಸ್ರು ಹೇಳಿದಾಗ, ಚಾಮರಾಜನಗರದಲ್ಲಿರುವ ಸಹೋದರನಿಗೆ ಪೋನ್ ಮಾಡಿ ವಿಚಾರಿಸಿದಾಗ ನಾನು ಯಾವ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದು, ಪೊಲೀಸರ ಸೋಗಿನಲ್ಲಿ ಬಂದು ಚಾಲಾಕಿ ಕಳ್ಳರು ಹಣ ದೋಚಿದ್ದಾರೆಂದು ತಿಳಿದು ಬಂದಿದ್ದು, ನಂತ್ರ ಚನ್ನರಾಯಪಟ್ಟಣ ನಗರಠಾಣೆಯಲ್ಲಿ ಲವಣ್ಣಗೌಡ ನೀಡಿದ ದೂರಿನನ್ವಯ 158/2020 ಕಲಂ 419, 420, 406 ಮತ್ತು ದಂಡಸಂಹಿತೆ 34 ರೀತಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ತನಿಖೆ ಮುಂದುವರೆಸಿದ್ದಾರೆ.
Last Updated : Aug 19, 2020, 4:14 AM IST

ABOUT THE AUTHOR

...view details