ಹಾಸನ :ಕಳೆದ 3 ದಶಕಗಳಿಂದ ಜಿಲ್ಲಾ ರಸ್ತೆಗೆ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆಯನ್ನ ಸರ್ಕಾರದ ಮುಂದಿಡುತ್ತಾ ಬಂದ್ರೂ, ನಾಯಕರುಗಳು ಕೇವಲ ಭರವಸೆಗಳ ಮೂಲಕ ಜನಸಾಮಾನ್ಯರ ಮೂಗಿಗಿ ತುಪ್ಪ ಸುರಿಯುತ್ತಿದ್ದಾರೆ. ರಸ್ತೆ ಕಾಮಗಾರಿ ಆಗಿಯೇ ಹೋಯ್ತು ಎನ್ನುವಷ್ಟರಲ್ಲಿ ಸರ್ಕಾರ ಬದಲಾದ ಹಿನ್ನಲೆಯಲ್ಲಿ ಮತ್ತೆ ನೆನೆಗುದಿಗೆ ಬಿದ್ದಿದ್ದು, ರಸ್ತೆಯಲ್ಲಿ ಓಡಾಡಲು ಜೀವವನ್ನೆ ಕೈಯಲ್ಲಿಡಿದು ಓಡಾಡುತ್ತಿದ್ದಾರೆ.
ಈ ರಸ್ತೆಯಲ್ಲಿ ವೈಯ್ಯಾರಿ ಹಾಗೆ ಬಳಕುತ್ತವೆ ವಾಹನಗಳು.. ಸ್ವಲ್ಪ ಎಚ್ಚರ ತಪ್ಪಿದ್ರೂ ಹರೋಹರ...!
ಹಾಸನ-ದುದ್ದ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮಣ್ಣಿನ ಸ್ನಾನದೊಂದಿಗೆ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರ ಗೋಳೂ ಕೇಳುವವರೇ ಇಲ್ಲದಂತಾಗಿದೆ.
ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ನಡೆಯದೇ ಇದ್ದುದರಿಂದ ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಓಡಾಡುವ ಮಂದಿ ಮಾತ್ರ ಅದ್ಯಾವ ಕರ್ಮ ಮಾಡಿದ್ರೋ ಗೊತ್ತಿಲ್ಲ ಕಣ್ರಿ. ಹೌದು ಹಾಸನ-ದುದ್ದ ಸಂಪರ್ಕಿಸುವ ರಸ್ತೆಯಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮಣ್ಣಿನ ಸ್ನಾನದೊಂದಿಗೆ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ರು ಕೂಡಾ ಇತ್ತ ಯಾವೊಬ್ಬ ಜನಪ್ರತಿನಿಧಿಯೂ ಕೂಡಾ ಗಮನಹರಿಸುವ ಕಾಯಕ ಮಾಡಿಲ್ಲ ಅನ್ನೋದೇ ಬೇಸರದ ಸಂಗತಿ.
ರಸ್ತೆ ಎಲ್ಲ ಕಡೆ ಗುಂಡಿ ಬಿದ್ದಿದ್ದು, ರಸ್ತೆಯಲ್ಲಿ ಸಾಗುವ ವಾಹನಗಳು ವೈಯಾರವಾಗಿ ಬಳುಕುತ್ತಲೇ ಬರುತ್ತವೆ. ಬಳುಕುವ ರೀತಿಯನ್ನ ನೋಡಿದ್ರೆ, ವಾಹನಗಳು ಎಲ್ಲಿ ಬಿದ್ದುಬಿಡುತ್ತೋ ಎಂಬ ಭಯ ಪ್ರಯಾಣಿಕರಿಗೆ. ಹೌದು ಈಗ ಇದು ಹೇಗಿದೆ ಅಂದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೇ ರಾಜಕೀಯ ಪ್ರತಿಷ್ಠೆ ಮತ್ತು ಕೆಲ ಸಾರ್ವಜನಿಕರ ವಿರೋಧದಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದು, ಅದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಅನುಕೂಲಕರವಾಗಲಿ ಎಂಬುದು ಸ್ಥಳೀಯರ ಒತ್ತಾಸೆ