ಹಾಸನ:ಅಶೋಕ್ ಲೈಲ್ಯಾಂಡ್ ಕಂಪನಿಯ ಗೂಡ್ಸ್ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗುಂಪಿನ ಸದಸ್ಯರನ್ನು ಹಾಸನ ಜಿಲ್ಲೆಯ ಹಳೇಬೀಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೂಡ್ಸ್ ವಾಹನಗಳನ್ನು ಕಳ್ಳತನ ಮಾಡ್ತಿದ್ದ ಖದೀಮರ ಬಂಧನ ಶಿವಮೊಗ್ಗದ ಸೊರಬ ಮೂಲದ ಶಾಹಿದ್, ಶಿವಮೊಗ್ಗದ ಹಿದಾಯದ್, ಸೊರಬಾದ ಅಬ್ದುಲ್, ಕಲಬುರಗಿ ಮೂಲದ ಅಬ್ದುಲ್, ಕಲಬುರಗಿ ಖಾಜಾ ಮಹಮದ್, ಮಂಗಳೂರು ಮೂಲದ ಭಾಸ್ಕರ್ ಪೂಜಾರಿ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಕೋಟಿಗೂ ಅಧಿಕ ಬೆಲೆ ಬಾಳುವ 2 ಲಾರಿ ಸೇರಿದಂತೆ 10 ಅಶೋಕ್ ಲೈಲ್ಯಾಂಡ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮಹೀಂದ್ರಾ ಪಿಕ್ಅಪ್ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ.
ಆರೋಪಿಗಳ ಜೊತೆಗೆ ಹಳೇಬೀಡು ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಾಹಿದ್ ಐಟಿಐ ವ್ಯಾಸಂಗ ಮಾಡಿದ್ದು, ಗುಂಪು ಕಟ್ಟಿಕೊಂಡು ಕಳ್ಳತನ ಮಾಡಲು ಮುಂದಾಗಿದ್ದರು. ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನಗಳ ಲಾಕ್ ಅನ್ನು ಸುಲಭವಾಗಿ ಓಪನ್ ಮಾಡಿ ಕದಿಯಬಹುದು ಎಂಬ ಕಾರಣಕ್ಕೆ ಇವುಗಳನ್ನು ಟಾರ್ಗೆಟ್ ಮಾಡಿ ರಾತ್ರಿ ಸಮಯದಲ್ಲಿ ವಾಹನಗಳ ರಿಪೇರಿ ಮಾಡೋ ಸೋಗಿನಲ್ಲಿ ಬಂದು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು.
ವಾಹನ ಕಳೆದುಕೊಂಡ ಮಾಲೀಕರೊಬ್ಬರು ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ಕೈಗೊಂಡ ಪೊಲೀಸರು ಖದೀಮರನ್ನು ಮಟ್ಟ ಹಾಕಿದ್ದಾರೆ.
ಇದನ್ನೂಓದಿ: ಬೆಂಗಳೂರಲ್ಲಿ ಹಾಡಹಗಲೇ ಹರಿದ ನೆತ್ತರು.. ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಬರ್ಬರ ಕೊಲೆ..