ಹಾಸನ: ಬಿಜೆಪಿ ಉಪಾಧ್ಯಕ್ಷ ಅರವಿಂದ್ ಲಿಂಬಾವಳಿ ಬಿಜೆಪಿ ಉಪಾಧ್ಯಕ್ಷ ಆಗಲಿಕ್ಕೆ ಅನ್ಫಿಟ್. ಯಾವುದೇ ಕಾರಣಕ್ಕೂ ಜೆಡಿಎಸ್ ಮತ್ತು ಬಿಜೆಪಿ ವಿಲೀನ ಆಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಅರವಿಂದ್ ಲಿಂಬಾವಳಿ ವಿರುದ್ಧ ಹರಿಹಾಯ್ದರು.
ಜೆಡಿಎಸ್ ಪಕ್ಷದಲ್ಲಿ ವಿಲೀನದ ಪ್ರಶ್ನೆಯೇ ಇಲ್ಲ: ಹಾಗಾದಲ್ಲಿ ನಾನು ರಾಜಕೀಯ ನಿವೃತ್ತಿ ಆಗ್ತಿನಿ: ರೇವಣ್ಣ - ಜೆಡಿಎಸ್ ಪಕ್ಷದಲ್ಲಿ ವಿಲೀನದ ಪ್ರಶ್ನೆಯೇ ಇಲ್ಲ
ದೇವೇಗೌಡರು ಬದುಕಿರುವವರೆಗೆ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ಯಾರ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ರಾಷ್ಟ್ರೀಯ ಪಕ್ಷಕ್ಕೆ ಹೀಗೆ ಹೇಳಿಕೆ ನೀಡುವುದು ಶೋಭೆ ತರುವಂತಹದ್ದಲ್ಲ ಎಂದು ಎಚ್. ಡಿ. ರೇವಣ್ಣ ಅರವಿಂದ್ ಲಿಂಬಾವಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ ನಗರದ ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವೇಗೌಡರು ಬದುಕಿರುವವರೆಗೆ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ಯಾರ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ರಾಷ್ಟ್ರೀಯ ಪಕ್ಷಕ್ಕೆ ಹೀಗೆ ಹೇಳಿಕೆ ನೀಡುವುದು ಶೋಭೆ ತರುವಂತಹದ್ದಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಹೊರತು ಬೇರೆ ಇನ್ಯಾವುದಕ್ಕೂ ಅಲ್ಲ. ಇಂತಹ ಹೇಳಿಕೆಗಳಿಂದ ಜೆಡಿಎಸ್ ಹೆದರುವುದಿಲ್ಲ. ಜನವರಿಯ ನಂತರ ಪಕ್ಷ ಎಂದರೇನು ಎಂದು ತೋರಿಸುತ್ತೇವೆ ಎಂದರು.
ನೋಡ್ರಿ ಚುನಾವಣೆ ವೇಳೆ ಇಂತಹ ಸುಳ್ಳು ಸುದ್ದಿ ಹಬ್ಬಿಸುವುದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ. ಈಗಾಗಲೇ ನಾನು ಕುಮಾರಸ್ವಾಮಿ ಮತ್ತು ದೇವೇಗೌಡರ ಜೊತೆ ಮಾತನಾಡಿದ್ದೇನೆ. ಯಾವುದೇ ಸರ್ಕಾರ ಬಂದರೂ ದೇವೇಗೌಡರ ಕುಟುಂಬಕ್ಕೆ ಕಿರುಕುಳ ನೀಡೋದು ಹೊಸತೇನಲ್ಲ. ಆದರೆ, ನಾವು ಸರ್ಕಾರಕ್ಕೆ ತೊಂದರೆ ಯಾಕೆ ಕೊಡಬೇಕೆಂದು ಸುಮ್ಮನಾಗಿದ್ದೆವು ಅಷ್ಟೇ. 2023 ಕ್ಕೆ ನಾವು ಏನು ಅಂತ ತೋರಿಸುತ್ತೇವೆ. ನಾವು ಹೆದರಿಕೊಂಡು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಕಾರ್ಯಕರ್ತರು ಇನ್ನು ರಾಜ್ಯದಲ್ಲಿದ್ದಾರೆ. ದ್ವೇಷದ ರಾಜಕಾರಣದಿಂದ ಬಿಜೆಪಿಗೆ ಮುಂದಿನ ಚುನಾವಣೆ ಉಲ್ಟಾ ಆಗಲಿದೆ ಎಂದರು.