ಕರ್ನಾಟಕ

karnataka

ETV Bharat / state

ಪ್ರಶಾಂತ್ ಕೊಲೆ ಆದ ನಂತರ ಪೊಲೀಸ್​ ಠಾಣೆಯಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಲಾಗಿದೆ : ಹೆಚ್​ ಡಿ ರೇವಣ್ಣ

ಪ್ರಶಾಂತ್ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳು ಸಂಭ್ರಮ ಪಟ್ಟಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಕೊಲೆಯ ಹಿಂದೆ ಇರುವ ಕೈವಾಡವನ್ನು ಬಯಲಿಗೆಳೆಯಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ..

Hd revanna pressmeet
ಹೆಚ್​ ಡಿ ರೇವಣ್ಣ

By

Published : Jun 4, 2022, 9:40 PM IST

ಹಾಸನ :ಪ್ರಶಾಂತ್ ಕೊಲೆ ಪ್ರಕರಣದ ಸಂಬಂಧ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮ ಪಟ್ಟಿದ್ದಾರೆ ಅಂತಾ ಮಾಜಿ ಸಚಿವ ಹೆಚ್ ಡಿ ರೇವಣ್ಣ ಗಂಭೀರವಾಗಿ ಆರೋಪ ಮಾಡಿದ್ದಾರೆ. ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, ನಗರಸಭೆಯ ಸದಸ್ಯನ ಕೊಲೆ ಗುಪ್ತಚರ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರ ಹಿನ್ನೆಲೆಯಲ್ಲಿ ನಡೆದಿದೆ.

ಪ್ರಶಾಂತ್ ಕೊಲೆಯಾದ ಬಳಿಕ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ವಿಜಯನಗರದಲ್ಲಿ ಮತ್ತು ತಮ್ಮ ಪೊಲೀಸ್ ಇಲಾಖೆಯಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಕೊಲೆಯಾದ ಬಳಿಕ ಹಾಸನ ನಗರ ಪೊಲೀಸ್ ಠಾಣೆ ಹಾಗೂ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ಯಾವ ಯಾವ ವ್ಯಕ್ತಿಗಳು ಬಂದಿದ್ದರು ಎಂಬುದು ಸಿಸಿಟಿವಿ ಚಿತ್ರೀಕರಿಸಿದೆ.

ಅದನ್ನು ನೀಡಬೇಕೆಂದು ಆರ್​ಟಿಐ ಮೂಲಕ ಕೇಳಿದರೆ ನಮ್ಮಲ್ಲಿ ಸಿಸಿಟಿವಿ ಫೋಟೋಸ್ ಕೊಡಲು ಸಾಧ್ಯವಿಲ್ಲ ಎಂಬ ಪ್ರತ್ಯುತ್ತರ ಕೊಟ್ಟಿದ್ದಾರೆ. ರಾಜ್ಯ ಸರ್ಕಾರವೇ ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ ಒಂದು ವರ್ಷ ಸಂಗ್ರಹ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದರೂ ಇವರು ಯಾಕೆ ಇಟ್ಟಿಲ್ಲ ಅಂತಾ ಹಾಸನ ನಗರ ಹಾಗೂ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ವಿರುದ್ಧ ಆರೋಪ ಮಾಡಿ ಇದರ ಸಮಗ್ರ ತನಿಖೆಯಾಗಬೇಕು ಅಂತಾ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಆಗ್ರಹ ಮಾಡಿದರು.

ಪ್ರಶಾಂತ್ ಕೊಲೆ ಸಮಗ್ರ ತನಿಖೆ ಆಗಬೇಕು :ನಗರಸಭಾ ಸದಸ್ಯನ ಕೊಲೆ ಪ್ರಕರಣದಲ್ಲಿ ಸಮಗ್ರ ತನಿಖೆ ಮಾಡುವುದಿಲ್ಲ ಎಂಬ ಕಾರಣಕ್ಕಾಗಿ ಅರಸೀಕೆರೆಯ ಸಿಪಿಐ ವಸಂತ್ ಅವರನ್ನು ನೇಮಿಸಿದ್ದರು. ಅವರು ವರದಿ ತಂದ ಬಳಿಕ ನಡುರಾತ್ರಿಯಲ್ಲಿ ವಿಜಯ್ ಭಾಸ್ಕರ್ ಯಾಕೆ ಹೋಗಬೇಕಿತ್ತು. ವಿಜಯಭಾಸ್ಕರ್ ಮತ್ತು ನಗರ ಠಾಣೆಯ ಪಿಐ ಅಕ್ರಮಗಳಲ್ಲಿ ಭಾಗಿಯಾಗಿದ್ದೇ ಪೊಲೀಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದರು.

ಇದನ್ನೂ ಓದಿ:ಮಲ್ಲಿಕಾರ್ಜುನ ಖರ್ಗೆ ಬೇರೆ ಪಕ್ಷದ ಯಾರ ಬೆಂಬಲಕ್ಕೂ ನಿಂತಿಲ್ಲ: ಡಿ ಕೆ ಶಿವಕುಮಾರ್

ABOUT THE AUTHOR

...view details