ಕರ್ನಾಟಕ

karnataka

ETV Bharat / state

ಹಾಸನ ಟಿಕೆಟ್​​ ಯಾರಿಗೆ? ದೇವೇಗೌಡರಿಂದ ನಿರ್ಧಾರವೆಂದ ಹೆಚ್​​.ಡಿ.ರೇವಣ್ಣ - ಈಟಿವಿಭಾರತ ಕನ್ನಡ

ಹಾಸನ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕೆಂಬುದನ್ನು ಜೆಡಿಎಸ್​ ವರಿಷ್ಠರಾದ ಹೆಚ್.ಡಿ.ದೇವೇಗೌಡ ನಿರ್ಧರಿಸುತ್ತಾರೆ ಎಂದು ಹೆಚ್​​.ಡಿ.ರೇವಣ್ಣ ಹೇಳಿದರು.

former-pm-devegowda-will-diecide-hasana-candidate
ಹಾಸನ ಟಿಕೆಟ್​​ ದೇವೇಗೌಡರು ನಿರ್ಧಾರ ಮಾಡುತ್ತಾರೆ : ಹೆಚ್​​.ಡಿ ರೇವಣ್ಣ

By

Published : Apr 11, 2023, 3:48 PM IST

ಹಾಸನ ಟಿಕೆಟ್​​ ಯಾರಿಗೆ?

ಹಾಸನ : ದೇವೇಗೌಡರು ನಮಗೆ ಸರ್ವೋಚ್ಛ ನಾಯಕರು. ಅವರು ಏನು ಹೇಳುತ್ತಾರೋ ಅದನ್ನು ನಾವು ಕೇಳುತ್ತೇವೆ. ಹಿಂದೆನೂ ಅವರ ಮಾತು ಕೇಳಿದ್ದೇವೆ, ಈಗಲೂ ಕೇಳುತ್ತೇವೆ, ಮುಂದೆಯೂ ಕೇಳುತ್ತೇವೆ. ತಿರಸ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಆನೆಕೆರೆಯಲ್ಲಿಂದು ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎಂದು ದೇವೇಗೌಡರು ಜನವರಿಯಲ್ಲಿಯೇ ತೀರ್ಮಾನ ಮಾಡಿದ್ದಾರೆ. ಅವರ ಮಾತೇ ಅಂತಿಮ ಎಂದರು. ನಮ್ಮ ಮುಖ್ಯ ಉದ್ದೇಶ ಇಲ್ಲಿನ ಏಳು ಕ್ಷೇತ್ರಗಳನ್ನು ಗೆಲ್ಲುವುದು. ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು.

ಇದನ್ನೂ ಓದಿ :ರಾಜ್​​ಕುಮಾರ್​ ಕುಟುಂಬಕ್ಕೆ ನೀಡಿದ ಮಾತನ್ನು ಮರೆತು ಬಿಟ್ರಾ ಮುಖ್ಯಮಂತ್ರಿಗಳೇ: ಡಿಕೆಶಿ ಪ್ರಶ್ನೆ

ದೇವೇಗೌಡರಿಗೆ 60 ವರ್ಷದ ರಾಜಕೀಯ ಅನುಭವವಿದೆ. ಎಲ್ಲಾ ಕ್ಷೇತ್ರಗಳ ಟಿಕೆಟ್‌ಗಳನ್ನು ದೇವೇಗೌಡರೇ ನಿರ್ಧರಿಸುತ್ತಾರೆ. ಸಾಮಾನ್ಯ ಕಾರ್ಯಕರ್ತ ಅಂದರೆ ಯಾರು? ಪಕ್ಷದಿಂದ ಯಾವ ಫಲ ಪಡೆಯದೇ ಇರುವವರು ಸಾಮಾನ್ಯ ಕಾರ್ಯಕರ್ತ. ಈ ಬಗ್ಗೆಯೂ ದೇವೇಗೌಡರೇ ನಿರ್ಧಾರ ಮಾಡುತ್ತಾರೆ ಎಂದರು. ಶಕುನಿಗಳ ಆಟಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಜನರು ತಕ್ಕ ಉತ್ತರ ಕೊಡುತ್ತಾರೆ. ನಮ್ಮ ಜನರನ್ನು ಮತ್ತು ಪಕ್ಷವನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ದೊಡ್ಡವರು ತೀರ್ಮಾನ ಮಾಡುತ್ತಾರೆ- ಸೂರಜ್​ ರೇವಣ್ಣ: ಹಾಸನ ಕ್ಷೇತ್ರದ ವಿಚಾರ ದೊಡ್ಡವರು ತೀರ್ಮಾನ ಮಾಡುತ್ತಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ವಿಧಾನಪರಿಷತ್​ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ. ಚನ್ನರಾಯಪಟ್ಟಣದ ಆನೆಕೆರೆಯಲ್ಲಿ ಮಾತನಾಡಿದ ಅವರು, ಹಾಸನದ ಅಭ್ಯರ್ಥಿ ವಿಚಾರವನ್ನು ರೇವಣ್ಣ ಸಾಹೇಬರು ಹಾಗೂ ದೊಡ್ಡವರು ತೀರ್ಮಾನ ಮಾಡುತ್ತಾರೆ. ಮಾಜಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ :ಮುಸ್ಲಿಂ ಸಮಾಜವನ್ನು ತುಳಿಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ: ಹೆಚ್ ಡಿ ರೇವಣ್ಣ

ABOUT THE AUTHOR

...view details