ಹಾಸನ :ಕಲಬುರಗಿಯಲ್ಲಿ ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಾವೇ ನಿರ್ಧರಿಸುವುದು ಎಷ್ಟು ಸರಿ? ಎನ್ನುವ ಮೂಲಕ ಎಲ್ಲಾ ಮುಖಂಡರ ಮಾತಿಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡ ಮಾತನಾಡಿದರು ಜಿಲ್ಲೆಯ ಉಡುವಾರೆ ಗ್ರಾಮದ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಈ ಕುರಿತು ಮಾತನಾಡಿದರು. ಕಲಬುರಗಿ ಮಹಾನಗರ ಪಾಲಿಕೆಯ ವಿಚಾರವನ್ನು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಅವರು ನಿರ್ಧಾರ ಮಾಡುತ್ತಾರೆ. ಅಲ್ಲಿನ ಸನ್ನಿವೇಶವನ್ನು ನೋಡಿಕೊಂಡು ಅಲ್ಲಿನ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ನಂತರ ನಿರ್ಧಾರ ಪ್ರಕಟಿಸುತ್ತಾರೆ ಎಂದರು.
ಮೇಯರ್ ಚುನಾವಣೆಯ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಆದರೆ, ಕಾಂಗ್ರೆಸ್ಗೆ ಅಧಿಕಾರ ನೀಡಬೇಕೆಂದು ಖರ್ಗೆಯವರು ಮಾತನಾಡಿರುವುದು ನಿಜ. ಕುಮಾರಸ್ವಾಮಿ ಅವರ ಜೊತೆಯೂ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ ಎಂದು ತಿಳಿಸಿದರು.
ಅಲ್ಲಿ ಇಬ್ಬರು ಮುಸ್ಲಿಂ ಜನಾಂಗ ಹಾಗೂ ಒಬ್ಬರು ರೆಡ್ಡಿ ಸಮುದಾಯದ ಹಾಗೂ ಮತ್ತೊಬ್ಬರು ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೊದಲು ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಈ ಎಲ್ಲಾ ಚರ್ಚೆಗಳನ್ನು ಮಾಡಬೇಕು. ಅದನ್ನು ಬಿಟ್ಟು ನಾವೇ ಎಲ್ಲವನ್ನು ಮನಸೋ ಇಚ್ಛೆ ತೀರ್ಮಾನ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
ಓದಿ:ಭದ್ರಾ ಅಭಯಾರಣ್ಯದಲ್ಲಿ ಅಕ್ರಮ ಕಡಿತಲೆ: ನಾಲ್ವರ ವಿರುದ್ಧ ಪ್ರಕರಣ ದಾಖಲು