ಕರ್ನಾಟಕ

karnataka

ETV Bharat / state

‘ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ನೂಕಬೇಡಿ’.. ವೇತನಕ್ಕಾಗಿ ಅತಿಥಿ ಉಪನ್ಯಾಸಕರ ಅಳಲು - Hassan Education Department

ಪಾಠ ಮಾಡಿಲ್ಲ ಎಂಬ ಕುಂಟು ನೆಪ ಹೇಳುವ ಸರ್ಕಾರವಾಗಿದೆ. ಅನೇಕ ಸರ್ಕಾರಿ ಶಾಲಾ-ಕಾಲೇಜಿನ ಖಾಯಂ ಬೋಧಕರು ಪಾಠ ಮಾಡುತ್ತಿಲ್ಲ. ಅವರಿಗೆ ವೇತನ ನೀಡುತ್ತಿಲ್ಲವೇ? ಪಾಠ ಮಾಡಲಿಲ್ಲ ಎಂಬ ಕಾರಣಕ್ಕೆ ಹಸಿವು, ದಾಹ ನಿಲ್ಲುತ್ತದೆಯೇ? ಅಧ್ಯಾಪಕ ಸಮುದಾಯವನ್ನು ಅನಾಗರಿಕರನ್ನಾಗಿ ಮಾಡಲು ಹೊರಟಿದೆ ಎಂದು ತಮ್ಮ ಅಳಲು ತೋಡಿಕೊಂಡರು.​

Guest lecturers demanding pay salaries for time of Lockdown
‘ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ನೂಕಬೇಡಿ’: ವೇತನಕ್ಕಾಗಿ ಅತಿಥಿ ಉಪನ್ಯಾಸಕರ ಅಳಲು

By

Published : Jun 19, 2020, 4:54 PM IST

ಹಾಸನ :ಉಪನ್ಯಾಸಕರ ಸರಣಿ ಆತ್ಮಹತ್ಯೆ, ಕುಟುಂಬಗಳ ಅಕಾಲಿಕ ಸಾವುಗಳ ಬಗ್ಗೆ ನ್ಯಾಯಾಂಗ, ಸದನ ಸಮಿತಿ ರಚಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು.​ ​ ​ ​

‘ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ನೂಕಬೇಡಿ’.. ವೇತನಕ್ಕಾಗಿ ಅತಿಥಿ ಉಪನ್ಯಾಸಕರ ಅಳಲು

ಈ ವೇಳೆ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೆ ಎನ್ ಯತೀಶ್​ ಮಾತನಾಡಿ, ದೇಶದಾದ್ಯಂತ ಆವರಿಸಿಕೊಂಡಿರುವ ಕೊರೊನಾ ಹೆಮ್ಮಾರಿಯ ದಾಳಿಯಿಂದಾಗಿ ದುಡಿದು ಬದುಕು ಸಾಗಿಸುತ್ತಿರುವ ಕೋಟ್ಯಂತರ ಜನ ಅತಂತ್ರರಾಗಿದ್ದಾರೆ. ಅವರಲ್ಲಿ ಅತಿಥಿ ಉಪನ್ಯಾಸಕರ ಸಮುದಾಯವೂ ಒಂದಾಗಿದೆ. ರಾಜ್ಯದಲ್ಲಿ ಪ್ರತಿವರ್ಷ 3 ಲಕ್ಷ ವಿದ್ಯಾರ್ಥಿಗಳ ಜ್ಞಾನಕ್ಕೆ ಬೆಳಕಿನ ಭರವಸೆಗಳ ಬೆಳೆ ಬೆಳೆಯುವಂತೆ ಸ್ಫೂರ್ತಿ ತುಂಬಿದ ನಾವು ಕತ್ತಲಲ್ಲಿ ಮುಳುಗಿದ್ದೇವೆ ಎಂದರು.

ಕೊರೊನಾ ದಾಳಿಯ ನಂತರ ಕಳೆದ 3 ತಿಂಗಳಲ್ಲಿ ಉದ್ಯೋಗ ಭದ್ರತೆ, ನಿಗದಿತ ವೇತನ ಕಾಲ ಕಾಲಕ್ಕೆ ಸಿಗದೆ, ಬದುಕಿನ ಕಟುವಾಸ್ತವ ಎದುರಿಸಲಾಗದೆ. ಲಾಕ್​ಡೌನ್ ಆದ ಮಾರ್ಚ್ ಮಧ್ಯಭಾಗದಿಂದ ಈ ತನಕ ಅತಿಥಿ ಉಪನ್ಯಾಸಕರಿಗೆ ಮಾನವೀಯ ದೃಷ್ಟಿಯಿಂದಲೂ ಗೌರವ ಧನ ನೀಡಿರುವುದಿಲ್ಲ. ಪಾಠ ಮಾಡಿಲ್ಲ ಎಂಬ ಕುಂಟು ನೆಪ ಹೇಳುವ ಸರ್ಕಾರವಾಗಿದೆ. ಅನೇಕ ಸರ್ಕಾರಿ ಶಾಲಾ-ಕಾಲೇಜಿನ ಖಾಯಂ ಬೋಧಕರು ಪಾಠ ಮಾಡುತ್ತಿಲ್ಲ. ಅವರಿಗೆ ವೇತನ ನೀಡುತ್ತಿಲ್ಲವೇ? ಪಾಠ ಮಾಡಲಿಲ್ಲ ಎಂಬ ಕಾರಣಕ್ಕೆ ಹಸಿವು, ದಾಹ ನಿಲ್ಲುತ್ತದೆಯೇ? ಅಧ್ಯಾಪಕ ಸಮುದಾಯವನ್ನು ಅನಾಗರಿಕರನ್ನಾಗಿ ಮಾಡಲು ಹೊರಟಿದೆ ಎಂದು ತಮ್ಮ ಅಳಲು ತೋಡಿಕೊಂಡರು.​

ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನಮ್ಮನ್ನು ಆತ್ಮಹತ್ಯೆಗೆ ನೂಕದಂತ ಲಾಕ್​​​ಡೌನ್ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಿ, ಅತಿಥಿ ಉಪನ್ಯಾಸಕರಿಗೆ 12 ತಿಂಗಳು ವೇತನ ನೀಡಬೇಕು ಮತ್ತು ಸೇವೆಯಲ್ಲಿ ವಿಲೀನಗೊಳಿಸಿ ತಕ್ಷಣ ಉದ್ಯೋಗ ಭದ್ರತೆ ಘೋಷಿಸಿ, ನಿಯಮಾನುಸಾರ ವೈದ್ಯಕೀಯ ಸೌಲಭ್ಯ ಮತ್ತು ಭವಿಷ್ಯ ನಿಧಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಸರಣಿ ಆತ್ಮಹತ್ಯೆಯ ಬಗ್ಗೆ ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹಾರದ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಹಾಗೂ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. 2020ನೇ ಸಾಲಿಗೆ ಅನಗತ್ಯ ಸಹಾಯಕ ಪ್ರಾಧ್ಯಾಪಕರನ್ನು ಮೂಲ ಕಾಲೇಜಿನಲ್ಲಿ ಕಾರ್ಯಭಾರವಿದ್ದರೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಾರ್ಯಭಾರವಿಲ್ಲದ ಕಾಲೇಜುಗಳಿಗೆ ನಿಯೋಜನೆಗೊಂಡವರ ನಿಯೋಜನೆಯನ್ನು ಕೂಡಲೇ ರದ್ದುಪಡಿಸಿ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರೆಸಬೇಕು ಎಂದು ತಮ್ಮ ಮನವಿಯಲ್ಲಿ ಆಗ್ರಹಿಸಿದರು.

ABOUT THE AUTHOR

...view details