ಕರ್ನಾಟಕ

karnataka

ETV Bharat / state

ಬಾಣವಾರ ಗ್ರಾ.ಪಂ. ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ - hasan

ಅರಸೀಕೆರೆ ತಾಲ್ಲೂಕಿನ ಬಾಣವಾರ ಗ್ರಾಮಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ನಾಸೀಮಾ ಭಾನು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಡಿ.ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾದರು.

ಬಾಣವಾರ ಗ್ರಾ.ಪಂ. ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

By

Published : Jul 12, 2019, 11:27 PM IST

Updated : Jul 12, 2019, 11:48 PM IST

ಹಾಸನ:ಅರಸೀಕೆರೆ ತಾಲ್ಲೂಕಿನ ಬಾಣವಾರ ಗ್ರಾಮಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಎರಡು ಸ್ಥಾನವೂ ಅವಿರೋಧವಾಗಿ ಆಯ್ಕೆಯಾಯಿತು.

ಬಾಣವಾರ ಗ್ರಾ.ಪಂ. ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ..

ಪಕ್ಷದ ಆಂತರಿಕ ಒಳ ಒಪ್ಪಂದದ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷೆ ಲೀಲಾವತಿ ಉಪಾಧ್ಯಕ್ಷರಾದ ಸೋಮಶೇಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ತೆರವಾದ ಸ್ಥಾನಗಳಿಗೆ ಇಂದು ಅವಿರೋಧವಾಗಿ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಸೀಮಾ ಭಾನು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಡಿ.ಮಲ್ಲಿಕಾರ್ಜುನ್ ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಇಬ್ಬರನ್ನ ಅವಿರೋಧವಾಗಿ ಆಯ್ಕೆ ಮಾಡಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷೆ ನಾಸೀಮಾ ಬಾನು, ಗ್ರಾಮ ಪಂಚಾಯ್ತಿ ಅಭಿವೃದ್ದಿಯಾಗಲು ಎಲ್ಲಾ ಸದಸ್ಯರುಗಳ ಬೆಂಬಲಬೇಕು. ಅದು ಪಕ್ಷಾತೀತವಾಗಿರಬೇಕು. ಆಗ ಮಾತ್ರ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ದಿ ಮಾಡಲು ಸಾಧ್ಯ. ನನಗೆ ಈ ಸ್ಥಾನ ಸಿಗಲು ನೀವೆಲ್ಲರೂ ಕಾರಣ. ಹಾಗೇಯೇ ಅಭಿವೃದ್ದಿ ವಿಚಾರದಲ್ಲಿಯೂ ಜಾತಿ, ಮತ, ಪಂಥವೆನ್ನದೇ ಪಕ್ಷಾತೀತವಾಗಿ ತಾವೆಲ್ಲರೂ ಬೆಂಬಲ ನೀಡಿದರೇ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಹಾಗಾಗಿ ನಾವೆಲ್ಲರೂ ಸೇರಿ ಗ್ರಾಮದ ಅಭಿವೃದ್ದಿ ಕೆಲಸವನ್ನ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಬಿಳಿ ಚೌಡಯ್ಯ, ಪಟೇಲ್ ಶಿವಪ್ಪ, ಬಿಎಸ್ ಅಶೋಕ್, ಬಿ.ಆರ್.ಶ್ರೀಧರ್, ಬಿ.ಎಂ ಜಯಣ್ಣ, ಬಿ.ಆರ್ ಲಕ್ಷ್ಮೀಶ್, ಲಿಕ್ಮಿ ಚಂದ್, ಬಿ.ಸಿ ಶ್ರೀನಿವಾಸಸ್ ಹಾಗೂ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಬಾಣಾವರ ಪೊಲೀಸ್ ಠಾಣೆಯ ಪಿಎಸ್ಐ ಅರುಣ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು

Last Updated : Jul 12, 2019, 11:48 PM IST

ABOUT THE AUTHOR

...view details