ಹಾಸನ: ಧಾರ್ಮಿಕ ದಿನಗಳಲ್ಲಿ ಎಲ್ಲಾ ಸಮುದಾಯದವರು ಶಾಂತಿ ಸೌಹಾರ್ದತೆ ಕಾಪಾಡೋಣ ಎಂದು ಶಾಸಕ ಪ್ರೀತಂ ಜೆ.ಗೌಡ ಕರೆ ನೀಡಿದ್ರು.
ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡೋಣ: ಶಾಸಕ ಪ್ರೀತಂ ಜೆ.ಗೌಡ - ಹಾಸನ
ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ. ಇಲ್ಲಿ ಸರ್ವರೂ ಸಮಾನರು ಹಾಗೂ ಸಹೋದರತೆಯ ವಾತಾವರಣ ಇದೆ. ಆ ಉತ್ತಮ ಪರಿಸರವನ್ನು ಹಾಳು ಮಾಡದಂತೆ ಕಾಪಾಡೋಣ ಎಂದು ಶಾಸಕ ಪ್ರೀತಂ ಜೆ.ಗೌಡ ಮನವಿ ಮಾಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಗಣೇಶ ಮತ್ತು ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ. ಇಲ್ಲಿ ಸರ್ವರೂ ಸಮಾನರು ಹಾಗೂ ಸಹೋದರತೆಯ ವಾತಾವರಣ ಇದೆ. ಆ ಉತ್ತಮ ಪರಿಸರವನ್ನು ಹಾಳು ಮಾಡದಂತೆ ಕಾಪಾಡೋಣ ಎಂದು ಮನವಿ ಮಾಡಿದರು.
ಮುಂದಿನ ಧಾರ್ಮಿಕ ಆಚಣೆಗಳ ಸಂಬಂಧ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದು, ಆಯಾ ವ್ಯಾಪ್ತಿಯ ಎಸ್ಐ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಈ ಬಗ್ಗೆ ಕ್ರಮವಹಿಸಲಿದ್ದಾರೆ. ಶಾಂತಿ ಸುವ್ಯವಸ್ಥೆಯುನ್ನು ಕಾಪಾಡಲು ಅಧಿಕಾರಿಗಳೊಂದಿಗೆ ಎಲ್ಲರೂ ಕೈ ಜೋಡಿಸೋಣ ಎಂದರು.