ಹಾಸನ: 'ಪಕ್ಕೆಲುಬು' ಪ್ರಕರಣ ಮಾಸುವ ಮುನ್ನವೇ ಹಾಸನ ಜಿಲ್ಲೆಯಲ್ಲಿ ಪುಳಿಯೊಗರೆ ಪ್ರಕರಣ ನಡೆದಿತ್ತು. ಅದನ್ನು ಗುರುವಾರ (ನಿನ್ನೆ) ಈಟಿವಿ ಭಾರತ, 'ಪಕ್ಕೆಲುಬು, ನಪುಂಸಕಲಿಂಗ ಆಯ್ತು, ಈಗ ಪುಳಿಯೋಗರೆ ಸರದಿ...' ವಿದ್ಯಾರ್ಥಿನಿಯ ವಿಡಿಯೋ ವೈರಲ್ ಎಂಬ ಶೀರ್ಷಿಕೆ ಅಡಿ ಪ್ರಕಟಿಸಿದ್ದ ಸುದ್ದಿಯನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂದು ಆ ಶಾಲಾ ಶಿಕ್ಷಕಕನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕ ನಿರ್ವಾಣಯ್ಯ ಅಮಾನತ್ತು ಆದೇಶದ ಪ್ರತಿ ಪಕ್ಕೆಲುಬು, ನಪುಂಸಕಲಿಂಗ ಆಯ್ತು, ಈಗ ಪುಳಿಯೋಗರೆ ಸರದಿ... ವಿದ್ಯಾರ್ಥಿನಿಯ ವಿಡಿಯೋ ವೈರಲ್
ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಹೊರವಲಯದ ಕಾಫಿ ಬೆಳೆಗಾರರ ಸಂಘದ ಸಮೀಪವಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹದೊಂದು ಪ್ರಕರಣ ನಡೆದಿತ್ತು. ಒಂದನೇ ತರಗತಿ ಓದುವ ಬಾಲಕಿಗೆ ಪುಳಿಯೊಗರೆ ಎಂಬ ಪದವನ್ನು ಹೇಳಿಸುವ ವೇಳೆ ವಿಡಿಯೋ ಮಾಡಿಸಿ ತಾನೇ ಹರಿಬಿಟ್ಟಿದ್ದ. ಪುಳಿಯೊಗರೆ ಎಂಬ ಪದವನ್ನು ತಪ್ಪುತಪ್ಪಾಗಿ ಉಚ್ಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಆದರೆ ಆ ವಿಡಿಯೋದಲ್ಲಿರುವ ಶಿಕ್ಷಕನಾಗಲಿ, ಶಾಲೆಯ ಗುರುತಾಗಲಿ ದೊರೆತಿರಲಿಲ್ಲ. ಹೀಗಾಗಿ ಆ ವಿಡಿಯೋದ ಜಾಡು ಹಿಡಿದ ಈಟಿವಿ ಭಾರತ, ಯಾವ ಶಾಲೆ ಮತ್ತು ಆ ಶಿಕ್ಷಕನ ಹೆಸರನ್ನು ಕಂಡುಹಿಡಿದು, ಅದನ್ನು ವರದಿ ಮಾಡುವ ಮೂಲಕ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿತ್ತು.
ಹೀಗಾಗಿ ಇಂದು ಸಕಲೇಶಪುರದ ಶಿಕ್ಷಕನಾಗಿರೋ ನಿರ್ವಾಣಯ್ಯ ನನ್ನ ಕರ್ನಾಟಕ ನಾಗರೀಕ ಸೇವಾ ನಿಯಮ ಸಿ.ಸಿ.ಎ ನಿಯಮ 10(1)ರ ಅಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ.ಶಿವಾನಂದ್ ಅವರು, ನಿರ್ವಾಣಯ್ಯನನ್ನು ಅಮಾನತ್ತು ಮಾಡಿ ಆದೇಶಿದ್ದಾರೆ.