ಹಾಸನ :ಕೊರೊನಾ ವೈರಸ್ನ ಭೀತಿಯಲ್ಲಿ ಕ್ಷೌರಿಕ ವೃತ್ತಿ ಮಾಡುವುದೇ ಅಸಾಧ್ಯವಾಗಿರುವುದರಿಂದ ಸರ್ಕಾರ ನಮಗೆ ಜೀವನ ಭದ್ರತೆ ಒದಗಿಸಬೇಕು ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದ ₹5 ಸಾವಿರ ಸಹಾಯ ಧನ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು 2020 ಜೂನ್ 30 ಕೊನೆ ದಿನವಾಗಿತ್ತು. ಆದರೆ, ಇದೀಗ ಜುಲೈ 10ರವರೆಗೂ ಅವಕಾಶ ನೀಡಿದ್ದು, ಕ್ಷೌರಿಕ ವೃತ್ತಿ ಮಾಡುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸವಿತಾ ಸಮಾಜದವರಿಗೆ ಸರ್ಕಾರ ಜೀವನ ಭದ್ರತೆ ಒದಗಿಸಲಿ.. ರವಿಕುಮಾರ್ ಒತ್ತಾಯ - ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್
ಹೆಚ್ಚು ಸುರಕ್ಷತಾ ಕ್ರಮ ಅನುಸರಿಸುತ್ತಿರುವ ವೈದ್ಯರು, ಸಹಾಯಕ ವೈದ್ಯರು, ಪೊಲೀಸರಿಗೆ ಕೊರೊನಾ ಅಂಟಿಕೊಂಡಿರುವ ಈ ವೇಳೆ ವ್ಯಕ್ತಿಗಳ ಸ್ಪರ್ಶ ಮಾಡದೆ ಕ್ಷೌರಿಕ ವೃತ್ತಿ ಮಾಡುವುದು ಅಸಾಧ್ಯದ ಕೆಲಸವಾಗಿದೆ. ನಮಗೆ ಜೀವ ವಿಮೆ, ಆರೋಗ್ಯ ವಿಮೆ ಘೋಷಿಸಿ ಕ್ಷೌರಿಕ ವೃತ್ತಿಯಲ್ಲಿರುವವರ ಜೀವನಕ್ಕೆ ಭದ್ರತೆ ಒದಗಿಸುವಂತೆ ಕೋರಿದರು..
ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್
ಹೆಚ್ಚು ಸುರಕ್ಷತಾ ಕ್ರಮ ಅನುಸರಿಸುತ್ತಿರುವ ವೈದ್ಯರು, ಸಹಾಯಕ ವೈದ್ಯರು, ಪೊಲೀಸರಿಗೆ ಕೊರೊನಾ ಅಂಟಿಕೊಂಡಿರುವ ಈ ವೇಳೆ ವ್ಯಕ್ತಿಗಳ ಸ್ಪರ್ಶ ಮಾಡದೆ ಕ್ಷೌರಿಕ ವೃತ್ತಿ ಮಾಡುವುದು ಅಸಾಧ್ಯದ ಕೆಲಸವಾಗಿದೆ. ನಮಗೆ ಜೀವ ವಿಮೆ, ಆರೋಗ್ಯ ವಿಮೆ ಘೋಷಿಸಿ ಕ್ಷೌರಿಕ ವೃತ್ತಿಯಲ್ಲಿರುವವರ ಜೀವನಕ್ಕೆ ಭದ್ರತೆ ಒದಗಿಸುವಂತೆ ಕೋರಿದರು.