ಕರ್ನಾಟಕ

karnataka

ETV Bharat / state

ಮುಷ್ಕರದ ನಡುವೆಯೂ ಹಾಸನದಲ್ಲಿ ಬಸ್ ಸಂಚಾರ ಆರಂಭ - ಹಾಸನದಲ್ಲಿ ಬಸ್ ಸಂಚಾರ

ಹಾಸನದಲ್ಲಿ ಒಂದೊಂದಾಗಿ ಕೆಎಸ್ಆರ್​ಟಿಸಿ ಬಸ್ಸುಗಳು ರಸ್ತೆಗೆ ಇಳಿಯುತ್ತಿವೆ. ನಿನ್ನೆ ಹಾಸನದಿಂದ ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ ಸೇರಿ ಸ್ಥಳೀಯವಾಗಿ ಬಸ್ಸುಗಳ ಹೋರಾಟ ಆರಂಭವಾಗಿವೆ. ಪೊಲೀಸ್​ ಭದ್ರತೆಯಲ್ಲಿ ಬೆಂಗಳೂರು ಮಾರ್ಗದತ್ತ ಕೂಡ ಬಸ್ ಸಂಚಾರ ಆರಂಭವಾಗಿದೆ.

Ksrtc

By

Published : Apr 11, 2021, 12:29 AM IST

ಹಾಸನ: ಕಳೆದ ನಾಲ್ಕು ದಿನಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಮಧ್ಯೆಯೂ ಹಾಸನದಲ್ಲಿ ಬಸ್ ಸಂಚಾರ ಆರಂಭವಾಗಿದೆ.

ಜಿಲ್ಲೆಯ ವಿಭಾಗಿಯ ನಿಯಂತ್ರಣ ಅಧಿಕಾರಿಗಳು ನೌಕರರ ಮನವೊಲಿಸುವ ಕಾರ್ಯದ ಜೊತೆಗೆ ನೋಟಿಸ್ ನೀಡುವ ಬೇದರಿಕೆಯ ಮೂಲಕ ಕೆಲವು ನೌಕರರನ್ನು ಮರಳಿ ಕರ್ತವ್ಯಕ್ಕೆ ಕರೆತರಲಾಗಿದೆ.

ಹಾಸನದಲ್ಲಿ ಒಂದೊಂದಾಗಿ ಕೆಎಸ್ಆರ್​ಟಿಸಿ ಬಸ್ಸುಗಳು ರಸ್ತೆಗೆ ಇಳಿಯುತ್ತಿವೆ. ನಿನ್ನೆ ಹಾಸನದಿಂದ ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ ಸೇರಿ ಸ್ಥಳೀಯವಾಗಿ ಬಸ್ಸುಗಳ ಹೋರಾಟ ಆರಂಭವಾಗಿವೆ. ಪೊಲೀಸ್​ ಭದ್ರತೆಯಲ್ಲಿ ಬೆಂಗಳೂರು ಮಾರ್ಗದತ್ತ ಕೂಡ ಬಸ್ ಸಂಚಾರ ಆರಂಭವಾಗಿದೆ.

ಮುಷ್ಕರದಿಂದ ಈಗಾಗಲೇ 2 ಕೋಟಿ ರೂ.ಗೂ ಅಧಿಕ ನಷ್ಟ ಹಾಸನ ವಿಭಾಗ ಕಂಡಿದೆ. ಸೋಮವಾರ ಮತ್ತು ಮಂಗಳವಾರ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಹೊರ ಜಿಲ್ಲೆಗಳತ್ತ ಪ್ರಯಾಣ ಬಳಸುವವರ ಸಂಖ್ಯೆ ಅಧಿಕವಾಗಿ ಇರುವುದರಿಂದ, ಈ ವಿಭಾಗಕ್ಕೆ ಎರಡರಷ್ಟು ನಷ್ಟ ಸಂಭವಿಸಬಹುದು ಎಂಬ ಕಾರಣಕ್ಕೆ ಕೆಲವು ಸಿಬ್ಬಂದಿ ಸಂಸ್ಥೆಯ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ABOUT THE AUTHOR

...view details