ಹಾಸನ: ವ್ಯಾಪಾರಸ್ಥರ ಸಲಹೆಯಂತೆ ವಾರದಲ್ಲಿ ಎರಡು ದಿನದ ಲಾಕ್ಡೌನ್ ಮಾಡಲು ಶಾಸಕರು ನೀಡಿದ ಆದೇಶಕ್ಕೆ ಶನಿವಾರದಂದು ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಮಾತ್ರ ತೆರೆದಿದ್ದು, ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಪ್ರತಿದಿನ ಮಧ್ಯಾಹ್ನ 2 ಗಂಟೆವರೆಗೂ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಬೇಕು. ನಂತರ ಲಾಕ್ಡೌನ್ ಮಾಡಲು ಹಾಸನದ ವ್ಯಾಪಾರಸ್ಥರು ಸೇರಿ ಸಭೆ ಮಾಡಿ ನಿರ್ಧರಿಸಿದಂತೆ ಉತ್ತಮ ಸ್ಪಂದನೆ ಸಿಕ್ಕಿದೆ.
ವ್ಯಾಪಾರಸ್ಥರ ಸ್ವಯಂ ಘೋಷಿತ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ರಾತ್ರಿ 8 ಗಂಟೆಯವರೆಗೆ ಮಾತ್ರ ವ್ಯಾಪಾರ-ವಹಿವಾಟು ನಡೆಸಿ ಭಾನುವಾರದಂದು ಸಂಪೂರ್ಣ ಲಾಕ್ಡೌನ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಶಾಸಕರ ಸೂಚನೆಗೆ ಇದು ಸೇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ಪಷ್ಟಪಡಿಸಿದ್ದಾರೆ.
ವಾರದ ಒಂದು ದಿವಸ ಮಾತ್ರ ಬಂದ್ ಇರುತ್ತದೆ. ಶನಿವಾರದ ಲಾಕ್ಡೌನ್ ಸೇರುವುದಿಲ್ಲ. ಆದರೆ ಶನಿವಾರದಂದು ಕೂಡ ಬಂದ್ ಮಾಡುವಂತೆ ನಗರಸಭೆ ಮತ್ತು ಪೊಲೀಸರು ಒತ್ತಾಯ ಮಾಡುತ್ತಿದ್ದಾರೆ ಎಂದು ಕೆಲ ವ್ಯಾಪಾರಸ್ಥರು ದೂರಿದ್ದಾರೆ.