ಸಕಲೇಶಪುರ(ಹಾಸನ):ಭಾನುವಾರದ ಲಾಕ್ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಜನರು ಲಾಕ್ಡೌನ್ಗಾಗಿ ಕಾಯುತ್ತಿದ್ರಾ ಎಂಬ ಅನುಮಾನ ಮೂಡಿಸುವ ರೀತಿ ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಏಕೆಂದರೆ ಜನರು ಲಾಕ್ಡೌನ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಲಾಕ್ಡೌನ್ ಘೋಷಣೆಯಾದ ಬೆನ್ನಲ್ಲೇ ಜನನಿಬಿಡ ರಾಷ್ಟ್ರೀಯ ಹೆದ್ದಾರಿ-75 ಸೇರಿದಂತೆ, ಇತರ ರಸ್ತೆಗಳು ವಾಹನ ಸಂಚಾರ ಹಾಗೂ ಜನರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿತ್ತು. ಅಗತ್ಯ ವಸ್ತುಗಳ ಸೇವೆಗಳಿಗೆ ಮಾತ್ರ ತಾಲೂಕು ಆಡಳಿತ ಅನುಮತಿ ನೀಡಿದ್ದರೂ ಕೂಡಾ ಜನರು ಮನೆ ಬಿಟ್ಟು ಹೊರ ಬರಲಿಲ್ಲ.