ಚನ್ನರಾಯಪಟ್ಟಣ: ಲಾಕ್ಡೌನ್ನಿಂದಾಗಿ ತರಕಾರಿ ಸೇರಿದಂತೆ ವಿವಿಧ ಬೆಲೆಗಳು ಮಾರುಕಟ್ಟೆಯಿಲ್ಲದೇ ಹೊಲದಲ್ಲೇ ಕೊಳೆಯುತ್ತಿವೆ. ಈ ನಡುವೆಯೇ ಶುಂಠಿ ಬೆಳೆಗಾರರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸರ್ಕಾರ ಬೆಂಬಲ ಬೆಲೆ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕಿದೆ.
ಚನ್ನರಾಯಪಟ್ಟಣ: ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಶುಂಠಿ ಬೆಳೆಗಾರರು - ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಶುಂಠಿ ಬೆಳೆಗಾರರು
ಚನ್ನರಾಯಪಟ್ಟಣದಲ್ಲಿ ಶೇ.90 ರಷ್ಟು ರೈತರು ಶುಂಠಿ ಬೆಳೆದಿದ್ದಾರೆ. ರೈತರು ನಮ್ಮ ದೇಶದ ಆಸ್ತಿ ಎನ್ನುವ ಸರ್ಕಾರ ಈ ಬಾರಿಯಾದರೂ ಶುಂಠಿಗೆ ಬೆಂಬಲ ಬೆಲೆ ನೀಡಿ ಅನ್ನದಾತರ ಕೈ ಹಿಡಿಯುತ್ತಾ? ಕಾದು ನೋಡಬೇಕಿದೆ.
ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಶುಂಠಿ ಬೆಳೆಗಾರರು
ಶುಂಠಿ ವರ್ಷದ ಬೆಳೆ. ಒಂದೇ ಬಾರಿ ಹಣ ನೋಡುವ ಆಸೆಯಿಂದಾಗಿ ರೈತರು ಹೆಚ್ಚಾಗಿ ಶುಂಠಿ ಬೆಳೆದಿದ್ದಾರೆ. ಆದರೆ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯಾದರೂ ಶುಂಠಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಅನ್ನದಾತರ ಕೈ ಹಿಡಿಯಬೇಕು ಎಂದು ರೈತರು ಮನವಿ ಮಾಡಿದ್ದಾರೆ.