ಹಾಸನ :ಜನರಲ್ ಸ್ಟೋರ್ ಬೀಗ ಮುರಿದು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ದಿನಬಳಕೆ ವಸ್ತುಗಳು ಹಾಗೂ 50 ಸಾವಿರ ನಗದನ್ನು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ವಲ್ಲಭಾಯಿ ರಸ್ತೆಯಲ್ಲಿರುವ ಪೈರೋಜ್ ಸ್ಟೋರ್ನಲ್ಲಿ ಕಳ್ಳರು ಬಾಗಿಲು ಮುರಿದು ಒಳ ನುಗ್ಗಿ ಅಂಗಡಿಯಲ್ಲಿದ್ದ ದಿನಬಳಕೆ ವಸ್ತುಗಳನ್ನ ಕದ್ದೊಯ್ದಿದ್ದಾರೆ.
ಹಾಸನದಲ್ಲಿ ವಾರದಲ್ಲಿ 3 ದಿನ ಮಾತ್ರ ವ್ಯಾಪಾರಕ್ಕೆ ಅವಕಾಶವಿದೆ. ಉಳಿದಂತೆ 4 ದಿನ ಲಾಕ್ಡೌನ್ ಮುಂದುವರೆದಿದೆ. ಶುಕ್ರವಾರ ಎಂದಿನಂತೆ ನಿಯಮಾನುಸಾರ ವ್ಯಾಪಾರ,ವಹಿವಾಟು ನಡೆಸಿ ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದರು.