ಅರಕಲಗೂಡು: ತಾಲೂಕು ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ಹೂವಣ್ಣ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಸಭೆ ಆರಂಭದಲ್ಲೇ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ನಿಖಿಲ್ ಕುಮಾರ್ ಮತ್ತು ಸದಸ್ಯ ಪ್ರದೀಪ್ ಹಾಗೂ ಅನಿಕೇತನ್ ನಡುವೆ ಏಕವಚನದಲ್ಲಿ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶ ಮಾಡಿದ ಅಧ್ಯಕ್ಷ ಹೂವಣ್ಣ ಗದ್ದಲ ತಿಳಿಗೊಳಿಸಿ ಸಭೆ ನಡೆಯಲು ಅನುವು ಮಾಡಿಕೊಟ್ಟರು.
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ.ಪಂ ಸದಸ್ಯ ಬಳಿಕ ಪಟ್ಟಣ ಪಂಚಾಯಿತಿ ಸದಸ್ಯ ಅನಿಕೇತನ್ ಮಾತನಾಡಿ ಪಟ್ಟಣ ಪಂಚಾಯಿತಿ ಜಾಗದಲ್ಲಿ ಅಕ್ರಮವಾಗಿ ಮಳಿಗೆ ತೆರೆದು ತಿಂಗಳುಗಳೇ ಕಳೆದಿವೆ. ಈ ಹಿಂದೆ ಇದ್ದಂತಹ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಕ್ರಮವಾಗಿ ಮಳಿಗೆ ಕಟ್ಟಿರುವ ವಾರಸುದಾರರಿಗೆ ನೋಟಿಸ್ ನೀಡಿ. ರಸ್ತೆ ಪುಟ್ಪಾತ್ನಿಂದ 6 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣ ಆಗಿರಬೇಕು. ನೀವು ಕಾನೂನು ಉಲ್ಲಂಘನೆ ಮಾಡಿ ಮಳಿಗೆ ನಿರ್ಮಾಣ ಮಾಡಿದ್ದೀರಿ. ಆದ್ದರಿಂದ ಮಳಿಗೆ ತೆರವು ಗೊಳಿಸಬೇಕು ಎಂದು ನೋಟಿಸ್ ನೀಡಿ ನಂತರ ವರ್ಗಾವಣೆ ಹೊಂದಿರುತ್ತಾರೆ.
ನೀವು ಬಂದು ತಿಂಗಳುಗಳೇ ಕಳೆದಿದೆ. ಮತ್ತು ಪತ್ರಿಕೆಗಳಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಸಪೋರ್ಟ್ ಮಾಡುತ್ತಿದ್ದಾರೆಯೇ ಎಂದು ಕಳವಳ ವ್ಯಕ್ತವಾಗಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇಷ್ಟಾದರೂ ನೀವು ಯಾವ ಕ್ರಮ ತೆಗೆದುಕೊಂಡಿದ್ದೀರಿ. ಮತ್ತು ನೀವು ಮಳಿಗೆ ತೆರವು ಗೊಳಿಸಲು ಸಾದ್ಯವಾಗದೇ ಇರುವುದನ್ನು ಗಮನಿಸಿದರೆ ಯಾವುದಾದರು ರಾಜಕೀಯ ಒತ್ತಡ ಇದಿಯಾ?. ಇದ್ದರೆ ಸಭೆಗೆ ತಿಳಿಸಿ. ಮತ್ತು ಅದೇ ಬಡವ ಅಂಗಡಿ ಹಾಕಿದ್ದರೆ ಬಿಡುತ್ತಿದ್ದರೆ ನಿಮ್ಮ ಅಧಿಕಾರಿಗಳು ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಶಿವಕುಮಾರ್ ಇನ್ನು 2ರಿಂದ 3 ದಿನದ ಒಳಗೆ ತೆರವುಗೊಳಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷ ಹೂವಣ್ಣ, ಮುಖ್ಯಾಧಿಕಾರಿ ಶಿವಕುಮಾರ್, ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಲಿಂಗರಾಜು, ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಕೃಷ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.