ಹಾಸನ: 13 ಲಕ್ಷ ರೂ. ಬೆಲೆ ಬಾಳುವ 130 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಬಾಣಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಅರಸೀಕೆರೆ ತಾಲೂಕಿನ ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಸಂತೋಷ್ ಎಂಬುವವನು ಅಕ್ರಮವಾಗಿ ಜಮೀನಲ್ಲಿ ಗಾಂಜಾ ಬೆಳೆದಿದ್ದು, ಖಚಿತ ಮಾಹಿತಿ ಮೆರೆಗೆ ತಹಶೀಲ್ದಾರ್ ಸಂತೋಷ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.
13 ಲಕ್ಷ ರೂ. ಮೌಲ್ಯದ ಗಾಂಜಾ ವಶ; ವ್ಯಕ್ತಿಯ ಬಂಧನ - ಹಾಸನ ಗಾಂಜಾ ಪ್ರಕರಣ
ಅರಸೀಕೆರೆ ತಾಲೂಕಿನ ಬಾಣಾವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 13 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗಿನ ದಾಳಿಯಲ್ಲಿ ಇದೇ ಅತಿದೊಡ್ಡ ಪ್ರಕರಣವಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ದೊಡ್ಡಹಳ್ಳಿ ಗ್ರಾಮದ ಇಟ್ಟಿಗೆ ಫ್ಯಾಕ್ಟರಿ ಹಿಂಭಾಗದಲ್ಲಿ ಗಾಂಜಾ ಬೆಳೆದಿದ್ದು, ಈತನ ವಿರುದ್ಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆತನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಜಿಲ್ಲೆಯಲ್ಲಿ ಈವರೆಗಿನ ದಾಳಿಯಲ್ಲಿ ಇದೇ ಅತಿದೊಡ್ಡ ಪ್ರಕರಣವಾಗಿದ್ದು, ದೊಡ್ಡ ಮೊತ್ತದ ಗಾಂಜಾ ವಶಪಡಿಸಿಕೊಂಡು ಆತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ನಾಗೇಶ್, ವೃತ್ತ ನಿರೀಕ್ಷಕ ಕೆ.ಎಂ. ವಸಂತ್, ಅರುಣ್ ಕುಮಾರ್, ಆನಂದ್ ಮತ್ತು ಸಿಬ್ಬಂದಿ ಪ್ರಕಾಶ್, ಮೋಹನ್ ಕುಮಾರ್, ದಿಲೀಪ್ ಕುಮಾರ್, ನಾಗರಾಜ್, ಹೇಮಂತ್ ಕುಮಾರ್, ಹರೀಶ್, ಪುಟ್ಟಸ್ವಾಮಿ, ನಾಗ ರಾಜನಾಯ್ಕ, ದೇವರಾಯ ಹೂಗಾರ್ ಇದ್ದರು.