ಹಾಸನ: ಗಾಂಜಾ ಸೇವಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಗರದ ತಣ್ಣೀರು ಹಳ್ಳ-ವಿಜಯನಗರ ಸಮೀಪದ ಗುಡೇನಹಳ್ಳಿ ಕೊಪ್ಪಲು ಬಳಿ ನಡೆದಿದೆ.
ನವೀನ್ (34) ಎಂಬ ಆಟೋ ಚಾಲಕನಿಗೆ ಫಾರುಕ್ ಮತ್ತು ಆತನ ಸ್ನೇಹಿತರು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಫಾರುಕ್ ಮತ್ತು ಆತನ ಸ್ನೇಹಿತರು ಗಾಂಜಾ ಸೇವಿಸುತ್ತಿದ್ದ ವೇಳೆ ನವೀನ್ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಫಾರೂಕ್ ತನ್ನ ಬಳಿಯಿದ್ದ ಚಾಕುವಿನಿಂದ ಮುಖದ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.