ಹಾಸನ:ಗಾಂಜಾ ಸೇವನೆ ಹಾಗೂ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ನಗರದ ಸಕಲೇಶಪುರ ಪಟ್ಟಣ ಠಾಣೆ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕೊರೊನಾ ಆತಂಕದ ನಡುವೆಯೂ ಗಾಂಜಾ ಸೇವನೆ, ಮಾರಾಟಕ್ಕೆ ಯತ್ನ: ನಾಲ್ವರ ಬಂಧನ - ಹಾಸನ ಗಾಂಜಾ ಸುದ್ದಿ
ಗಾಂಜಾ ಸೇವನೆ ಹಾಗೂ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ಪಟ್ಟಣ ಠಾಣೆ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
![ಕೊರೊನಾ ಆತಂಕದ ನಡುವೆಯೂ ಗಾಂಜಾ ಸೇವನೆ, ಮಾರಾಟಕ್ಕೆ ಯತ್ನ: ನಾಲ್ವರ ಬಂಧನ ganja Accused Arressted in hassan](https://etvbharatimages.akamaized.net/etvbharat/prod-images/768-512-6562886-531-6562886-1585312233162.jpg)
ನಾಲ್ವರ ಬಂಧನ
ಪಟ್ಟಣದ ಬಿ.ಎಂ ರಸ್ತೆಗೆ ಹೊಂದಿಕೊಂಡಂತೆ ಇರುವ ಖಾಸಗಿ ಕಲ್ಯಾಣ ಮಂಟಪದ ಸಮೀಪ ಖಚಿತ ಮಾಹಿತಿ ಮೇರೆಗೆ ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲು ಯತ್ನಿಸುತ್ತಿದ್ದ ಲಹಿ ಖಾನ್ (24), ಸುಜಿತ್ (22), ಸಂದೇಶ್ (22), ಪುನೀತ್ (21) ಎಂಬ ಯುವಕರನ್ನು ಖಚಿತ ಮಾಹಿತಿಯ ಮೇರೆಗೆ ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಗೋಪಿ, ಆರಕ್ಷಕ ವೃತ್ತ ನಿರೀಕ್ಷಕ ಗಿರೀಶ್, ನಗರ ಠಾಣೆ ಪಿಎಸ್‌ಐ ರಾಘವೇಂದ್ರ, ಪೊಲೀಸ್ ಸಿಬ್ಬಂದಿ ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.