ಕರ್ನಾಟಕ

karnataka

ETV Bharat / state

ಅರಸೀಕೆರೆಯಲ್ಲಿ ಗಣಪತಿ ವಿಸರ್ಜನಾ ಉತ್ಸವ: ಅಹಿತಕರ ಘಟನೆ ನಡೆಯದಂತೆ ರೌಡಿಗಳ ಪರೇಡ್ - ನವೆಂಬರ್ 1 ಮತ್ತು 2ರಂದು  ಕಾರ್ಯಕ್ರಮ

ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಉತ್ಸವದ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ದೃಷ್ಠಿಯಿಂದ ಜಿಲ್ಲಾ ಎಸ್ಪಿ ರಾಮ್ ನಿವಾಸ್ ಸೆಪಟ್ ಹಾಗೂ ಡಿಎಸ್ಪಿ ನಾಗೇಶ್ ರೌಡಿ ಶೀಟರ್‌ಗಳ ಪರೇಡ್ ನಡೆದರು.

ಪರೇಡ್

By

Published : Nov 1, 2019, 9:59 AM IST

ಹಾಸನ:ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಉತ್ಸವದ ಹಿನ್ನಲೆ, ಅರಸೀಕೆರೆ ನಗರ ಠಾಣೆ ಆವರಣದಲ್ಲಿ ರೌಡಿ ಶೀಟರ್‌ಗಳ ಪರೇಡ್ ನಡೆಸಿದ ಎಸ್ಪಿ ರಾಮ್ ನಿವಾಸ್ ಸೆಪಟ್, ಯಾವುದೆ ಕಾನೂನು ಬಾಹಿರ ಚಟುವಟಿಕೆ ನಡೆಸದೆ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಎಚ್ಚರಿಕೆ ನೀಡಿದರು.

ಅಹಿತಕರ ಘಟನೆ ನಡೆಯದಂತೆ ರೌಡಿಗಳ ಪರೇಡ್

ನವೆಂಬರ್ 1 ಮತ್ತು 2ರಂದು ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದ್ದು, ಶನಿವಾರ ರಾತ್ರಿ 9ರ ವೇಳೆಗೆ ಅರಸೀಕೆರೆಯ ಕೆರೆಯಲ್ಲಿ ಭಾರಿ ಮದ್ದು ಗುಂಡುಗಳ ಪ್ರದರ್ಶನದ ನಂತರ ವಿಸರ್ಜನೆ ಮಾಡಲಾಗುವುದು. ಈ ಎರಡು ದಿನಗಳಂದು ನಡೆಯುವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ದೃಷ್ಠಿಯಿಂದ ಜಿಲ್ಲಾ ಎಸ್ಪಿ ರಾಮ್ ನಿವಾಸ್ ಸೆಪಟ್ ಹಾಗೂ ಡಿಎಸ್ಪಿ ನಾಗೇಶ್ ರೌಡಿ ಶೀಟರ್‌ಗಳ ಪರೇಡ್ ನಡೆಸಲಾಯಿತು.

ಕಾರ್ಯಕ್ರಮಗಳು ಸೇರಿದಂತೆ ಸಮಾನ್ಯ ದಿನಗಳಲ್ಲೂ ಕೂಡ ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ತಮ್ಮ ಮೇಲಿರುವ ಕೇಸುಗಳನ್ನು ಸರಿಪಡಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸಿ, ತಮ್ಮ ನಡವಳಿಕೆಗಳ ಆಧಾರಿತವಾಗಿ ಕೇಸುಗಳನ್ನು ವಾಪಸ್ ಪಡೆಯುವ ವ್ಯವಸ್ಥೆಗೆ ನಾವು ಸಹಕರಿಸುತ್ತೇವೆ ಎಂದರು.

ABOUT THE AUTHOR

...view details