ಕರ್ನಾಟಕ

karnataka

ETV Bharat / state

ಗಾಂಧೀ ಜಯಂತಿ: ಹಾಸನದಲ್ಲಿ ಸ್ವಚ್ಛತಾ ಜಾಗೃತಿ - ಹಾಸನದಲ್ಲಿ ಗಾಂಧಿ ಜಯಂತಿ

ಹಾಸನದಲ್ಲಿ ಹರಳಹಳ್ಳಿ ಹಾಗೂ ತೇಜೂರು ಗ್ರಾಮ ಪಂಚಾಯತ್​ನಿಂದ ಜಿಲ್ಲಾ ಪಂಚಾಯತ್​ ನೇತೃತ್ವದಲ್ಲಿ ಪ್ಲಾಸ್ಟಿಕ್ ಬಳಸಬಾರದು ಎಂಬ ಜಾಗೃತಿ ಮೂಡಿಸುವ ಸ್ವಚ್ಛತಾ ಕಾರ್ಯವನ್ನು ಅ.1ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಹ ಆಯೋಜಿಸಲಾಗಿತ್ತು.

ಗಾಂಧೀ ಜಯಂತಿ ಹಿನ್ನಲೆಯಲ್ಲಿ ಹಾಸನದಲ್ಲಿ ಜಾಗೃತಿ ಮೂಡಿಸುವ ಸ್ವಚ್ಛತಾ ಕಾರ್ಯ

By

Published : Oct 2, 2019, 10:34 AM IST

ಹಾಸನ:ನಗರದ ಡೈರಿ ವೃತ್ತ ಬಳಿ ಇರುವ ರಿಂಗ್ ರಸ್ತೆಯಲ್ಲಿ ಸತ್ಯಮಂಗಲ ಗ್ರಾ.ಪಂ. ಹರಳಹಳ್ಳಿ ಹಾಗೂ ತೇಜೂರು ಗ್ರಾಮ ಪಂಚಾಯತ್​ನಿಂದ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಸಬಾರದು ಎಂಬ ಜಾಗೃತಿ ಮೂಡಿಸುವ ಸ್ವಚ್ಛತೆ ಕಾರ್ಯವನ್ನು ಅ.1ರಂದು ಹಮ್ಮಿಕೊಳ್ಳಲಾಗಿತ್ತು.

ಗಾಂಧೀ ಜಯಂತಿ ಹಿನ್ನಲೆಯಲ್ಲಿ ಹಾಸನದಲ್ಲಿ ಜಾಗೃತಿ ಮೂಡಿಸುವ ಸ್ವಚ್ಛತಾ ಕಾರ್ಯ

ಗ್ರಾಮ ಪಂಚಾಯತ್​ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಇಲಾಖೆ ಸಿಬ್ಬಂದಿ ರಿಂಗ್ ರಸ್ತೆಯ ಉದ್ದಕ್ಕೂ ಕಂಡುಬಂದ ಪ್ಲಾಸ್ಟಿಕ್​ಅನ್ನು ಒಂದೆಡೆ ಸಂಗ್ರಹಿಸಿ, ಟ್ರ್ಯಾಕ್ಟರ್ ಮೂಲಕ ಸಾಗಿಸಿ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಿದರು. ಇನ್ನು ಸತ್ಯಮಂಗಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಟರಾಜು ಮಾತನಾಡಿ, ಜಿಲ್ಲಾ ಪಂಚಾಯತ್​ ಜೊತೆ ಸತ್ಯಮಂಗಲ ಗ್ರಾ.ಪಂ. ಹರಳಹಳ್ಳಿ ಹಾಗೂ ತೇಜೂರು ಗ್ರಾಮ ಪಂಚಾಯತ್​ ಸೇರಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಿ, ಬಟ್ಟೆ ಬ್ಯಾಗ್ ಬಳಸುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿರುವುದಾಗಿ ಹೇಳಿದ್ರು.

ಮತ್ತೊಂದೆಡೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಇಒ ಪರಮೇಶ್ ಅವರು, ಪೋಷಕರು ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ನೀಡುತ್ತಾರೆ. ನಂತರದಲ್ಲಿ ಮಕ್ಕಳೆಲ್ಲಾ ಅಮೆರಿಕ ಸೇರಿದಂತೆ ಇತರೆ ದೇಶಗಳಿಗೆ ಕೆಲಸ ಅರಸಿ ಹೋಗುವುದರಿಂದ ಕೊನೆಗೆ ಅವರ ತಂದೆ-ತಾಯಿ ಒಂಟಿಯಾಗುತ್ತಾರೆ. ಹೀಗೆ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ಮೂಡುವುದಿಲ್ಲ. ಹೆತ್ತವರೊಂದಿಗೆ ಮಕ್ಕಳು ಜೊತೆಯಲ್ಲಿದ್ದರೆ ಮಾತ್ರ ಅವರಿಗೆ ಸಿಗುವ ಸಂತೋಷ ಮತ್ತೆಲ್ಲೂ ಸಿಗುವುದಿಲ್ಲ ಎಂದು ಸಲಹೆ ನೀಡಿದ್ರು.

ABOUT THE AUTHOR

...view details