ಚನ್ನರಾಯಪಟ್ಟಣ : ಇತ್ತೀಚಿನ ದಿನಗಳಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಕೊರೊನಾ ವಾರಿಯರ್ಸ್ಗಳೇ ಮಾಡುತ್ತಿದ್ದರು. ಆದರೆ, ಚನ್ನರಾಯಪಟ್ಟಣದಲ್ಲಿ ವಾರಿಯರ್ಸ್ಗಳ ಈ ಕಾರ್ಯಕ್ಕೆ ಆರ್ಎಸ್ಎಸ್ ಹಾಗೂ ಜನಪರ ಸಂಘಟನೆಯವರು ಕೈ ಜೋಡಿಸಿದ್ದಾರೆ. ಯಾವುದೇ ಬೇಧ, ಭಾವ ಮಾಡದೆ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸುತ್ತಾರೆ.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಆರ್ಎಸ್ಎಸ್..! - ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸುದ್ದಿ
ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುವ ಮೂಲಕ ಕೋವಿಡ್ ವಾರಿಯರ್ಸ್ಗೆ ಆರ್ಎಸ್ಎಸ್ ಸಂಘಟನೆಯವರು ಕೈ ಜೋಡಿಸಿದ್ದಾರೆ.
![ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಆರ್ಎಸ್ಎಸ್..! corona](https://etvbharatimages.akamaized.net/etvbharat/prod-images/768-512-9260285-288-9260285-1603281379393.jpg)
ಆರ್ಎಸ್ಎಸ್
ಈ ಬಗ್ಗೆ ಮಾತಾಡಿರುವ ಆರ್ಎಸ್ಎಸ್ ಮುಖಂಡ ಜಗದೀಶ್, ಕೊರೊನಾದಿಂದ ಮೃತಪಟ್ಟವರನ್ನ ಅಂತ್ಯ ಸಂಸ್ಕಾರ ನಾವೇ ಮಾಡುತ್ತೇವೆ. ಇದರಿಂದ ಕೊರೊನಾ ವಾರಿಯರ್ಸ್ ಹಾಗೂ ಅವರ ಕುಟುಂಬದವರಿಗೆ ನಮ್ಮಿಂದ ಸ್ವಲ್ಪವಾದರೂ ಸಹಾಯವಾಗುತ್ತೆ ಎಂದಿದ್ದಾರೆ.
ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿದ ಆರ್ಎಸ್ಎಸ್ ಕಾರ್ಯಕರ್ತರು
ಇಂದು ಕೂಡ ಆರ್ಎಸ್ಎಸ್ ಸಂಘಟನೆಯವರು ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.