ಹಾಸನ:ನಗರದ ಶ್ರೀ ಹಾಸನಾಂಬೆ ದೇವಾಲಯದ ಆವರಣದಲ್ಲಿ ಸಹರ ಜನಸೇವಾ ಟ್ರಸ್ಟ್ ವತಿಯಿಂದ ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ನೇತೃತ್ವದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಔಷಧಿಯನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಹಾಸನ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಔಷಧಿ ವಿತರಣೆ - ಸಹರ ಜನಸೇವಾ ಟ್ರಸ್ಟ್
ಹಾಸನಾಂಬೆ ದೇವಾಲಯದ ಆವರಣದಲ್ಲಿ ಸಹರ ಜನಸೇವಾ ಟ್ರಸ್ಟ್ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಉಚಿತವಾಗಿ ಔಷಧಿ ವಿತರಿಸಲಾಯಿತು.
![ಹಾಸನ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಔಷಧಿ ವಿತರಣೆ hassan](https://etvbharatimages.akamaized.net/etvbharat/prod-images/768-512-7974968-823-7974968-1594389633532.jpg)
ಹಾಸನ
ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಉಚಿತ ಔಷಧಿ ವಿತರಣೆ
ಹಾಸನಾಂಬೆ ದೇವಿಗೆ ಹಾಗೂ ಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅಗಿಲೆ ಯೋಗೀಶ್, ಕೊರೊನಾ ಜಗತ್ತಿನಾದ್ಯಂತ ಆವರಿಸಿದೆ. ಸರ್ಕಾರಿ ವೈದ್ಯಾಲಯ, ಖಾಸಗಿ ವೈದ್ಯಕೀಯ ಪ್ರಯೋಗಾಲಯಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಅನೇಕ ಪ್ರಯೋಗಗಳನ್ನು ಮಾಡಿ ರೋಗವನ್ನು ಹೋಗಲಾಡಿಸಲು ಸತತ ಪ್ರಯತ್ನ ಪಡುತ್ತಿರುವುದಾಗಿ ಹೇಳಿದರು.