ಹಾಸನ: ವಾಹನಗಳ ಕಳವು ಮಾಡುತ್ತಿದ್ದ ನಾಲ್ಕು ಜನ ಅಂತರ್ ರಾಜ್ಯ ಕಳ್ಳರ ಬಂಧಿಸಿ ಅವರಿಂದ 4 ಲಕ್ಷ ನಗದು ಮತ್ತು 21 ಲಕ್ಷ ಮೌಲ್ಯದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಶಂಕರ್ ಮಂಜುಗೌಡ ಮತ್ತು ಮುನ್ನಾ ಕೋಟ್ಯಾನ್, ತಮಿಳುನಾಡಿನ ಅಬ್ದುಲ್ ರಜಾಕ್ ಹಾಗೇ ಹಾಸನದ ವಿಜಯ್ ಕುಮಾರ್ ಬಂಧಿತ ಆರೋಪಿಗಳು.
ಅರಸೀಕೆರೆ ಉಪ ವಿಭಾಗದ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದಾಗ ದಾಖಲಾತಿಗಳನ್ನು ಪರಿಶೀಲಿಸಿದಾಗ ಕಳ್ಳತನದ ವಾಹನ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಾಹನದಲ್ಲಿದ್ದವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಇವರು ಹಲವಾರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇವರ ಇತರ ಇನ್ನೂ 12 ಕೇಸ್ಗಳು ಬೆಳಕಿಗೆ ಬಂದಿದೆ.