ಸಕಲೇಶಪುರ (ಹಾಸನ):ಕೆಲವು ದಿನಗಳ ಹಿಂದೆ ಸಕಲೇಶಪುರ ನಗರ ಠಾಣಾ ಸರಹದ್ದಿನ ಜಾನೆಕೆರೆ ಗ್ರಾಮದಲ್ಲಿ ಮನೆಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಕಲೇಶಪುರ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನಾಲ್ವರು ಖದೀಮರ ಬಂಧನ - Hassan News
ಕೆಲವು ದಿನಗಳ ಹಿಂದೆ ಸಕಲೇಶಪುರ ನಗರ ಠಾಣಾ ಸರಹದ್ದಿನ ಜಾನೆಕೆರೆ ಗ್ರಾಮದಲ್ಲಿ ಮನೆಕಳ್ಳತನ ಮಾಡಿದ್ದ ಆರೋಪಿಗಳನ್ನು ಸಕಲೇಶಪುರ ಉಪವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಚಿನ್ ಕುಮಾರ್ (31), ನವೀನ್ (23), ಸುನಿಲ್ (25), ಹರೀಶ್ (28) ಬಂಧಿತ ಆರೋಪಿಗಳು. ಜುಲೈ 3 ರಂದು ತಾಲೂಕಿನ ಜಾನೆಕೆರೆ ಗ್ರಾಮದ ಶೀಲ ಎಂಬುವರ ಮನೆಗೆ ಹಾಡಹಗಲೇ ನುಗ್ಗಿದ ಈ ಖದೀಮರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಕಲೇಶಪುರ ಉಪವಿಭಾಗ ಪೊಲೀಸರು, ತನಿಖೆ ನಡೆಸುತ್ತಿದ್ದಾಗ ಒಂದು ವಾರದ ಹಿಂದೆ ಆರೋಪಿಗಳು ಬಾಳ್ಳುಪೇಟೆ ವೃತ್ತದಲ್ಲಿರುವ ಬಗ್ಗೆ ಮಾಹಿತಿ ದೊರಕಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿ ಇಂದು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆ ವೇಳೆ ಈ ಆರೋಪಿಗಳು ಹಾಸನ ಹಾಗೂ ತುಮಕೂರು ಜಿಲ್ಲೆಯಲ್ಲೂ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಬಂಧಿತರಿಂದ ಮೂರು ಪ್ರಕರಣದ ಒಟ್ಟು 5 ಲಕ್ಷದ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಒಂದು ಮೊಬೈಲ್ ಸೇರಿ ಕೃತ್ಯಕ್ಕೆ ಉಪಯೋಗಿಸಿದ ಮೂರು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.