ಹಾಸನ/ಹೊಳೆನರಸೀಪುರ:ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಇಂತಹ ಒಂದು ದುರ್ಘಟನೆ ನಡೆಯಬಾರದಿತ್ತು. ನಾನು ಇಷ್ಟು ವರ್ಷ ಎಂಎಲ್ಎ ಆಗಿದ್ದೇನೆ. ಇಲ್ಲಿ ಸ್ಫೋಟಕ ದಾಸ್ತಾನು ಮಾಡಿರುವ ವಿಚಾರವೇ ನನಗೆ ಗೊತ್ತಿಲ್ಲ. ಮೊದಲ ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವ ಜೊತೆಗೆ ಜಿಲ್ಲೆಯ ಎಲ್ಲಾ ಕ್ವಾರಿಗಳನ್ನು ದ್ರೋಣ್ ಮೂಲಕ ಸರ್ವೆ ಮಾಡಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಇರುವಂತಹ ಕ್ವಾರಿಗಳ ಪಟ್ಟಿ, ಅಧಿಕೃತ ಹಾಗೂ ಅನಧಿಕೃತ ಇರುವಂತಹ ಕಾರ್ಯಗಳ ಬಗ್ಗೆ ಮಾಹಿತಿ ಬೇಕೆಂದು ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಕೆಲವಡೆ 37 ಅಡಿವರೆಗೂ ಸ್ಫೋಟಕ ಸಿಡಿಸಲು ರಿಂಗ್ ಕೊರೆಯುತ್ತಾರೆ. ಈ ಬಗ್ಗೆ ಡಿಸಿಗೆ ದೂರು ನೀಡಿದ್ದೇನೆ ಎಂದರು.