ಹಾಸನ:ಆತ ಪ್ರಾಕ್ಟಿಕಲ್ ಗೊತ್ತಿಲ್ಲದ ಗಿರಾಕಿ. ಅವನಿಗೆ ಅಭಿವೃದ್ಧಿ ಎಂದರೆ ಏನು ಅಂತ ಗೊತ್ತಿದೆಯಾ ಎನ್ನುವ ಮೂಲಕ ಶಾಸಕ ಪ್ರೀತಮ್ ಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗುಡುಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಚನ್ನಪಟ್ಟಣ ಅಭಿವೃದ್ಧಿ ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಳೆದ ಎರಡು ಅವಧಿಯಲ್ಲಿ ಅಧಿಕಾರ ಹಿಡಿದ ರಾಷ್ಟ್ರೀಯ ಪಕ್ಷಗಳು ದ್ವೇಷದಿಂದ ಕಾಮಗಾರಿಯನ್ನು ಮೊಟಕುಗೊಳಿಸಿವೆ ಎಂದರು ಆರೋಪಿಸಿದರು.
ನಗರದ ಹೊಸ ಬಸ್ ನಿಲ್ದಾಣದಲ್ಲಿರುವ ಚನ್ನಪಟ್ಟಣ ಕೆರೆಯ ಅಭಿವೃದ್ಧಿಗೆ ಮೈತ್ರಿ ಸರ್ಕಾರದಲ್ಲಿ ಅನುಮೋದನೆ ಪಡೆದು 144 ಕೋಟಿ ವೆಚ್ಚದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲಾಗಿತ್ತು. ಕೆರೆಯಂಗಳದಲ್ಲಿ ವಾಯು ವಿಹಾರ, ದೋಣಿ ವಿಹಾರ, ವಾಟರ್ ಪಾರ್ಕ್, ಮಕ್ಕಳ ಟ್ರೈನ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ರಾಜಸ್ಥಾನ ಮೂಲದ ರಾಯಲ್ ಶರ್ಮಾ ಎಂಬ ಕಂಪನಿಗೆ 88.5 ಕೋಟಿ ರೂ.ಗೆ ಟೆಂಡರ್ ನೀಡಿದ್ದು, ಪ್ರಾಕ್ಟಿಕಲ್ ಗೊತ್ತಿಲ್ಲದ ಗಿರಾಕಿಯ ಮಾತು ಕಟ್ಟಿಕೊಂಡು ಸರ್ಕಾರ ಕಾಮಗಾರಿಯನ್ನು ತಡೆ ಹಿಡಿದಿದೆ ಎನ್ನುವ ಮೂಲಕ ಪ್ರೀತಮ್ ಗೌಡ ಹೆಸರು ಪ್ರಸ್ತಾಪಿಸಿದೆ ವಾಗ್ದಾಳಿ ನಡೆಸಿದರು.