ಕರ್ನಾಟಕ

karnataka

By

Published : Oct 20, 2019, 6:22 AM IST

ETV Bharat / state

ಅಧಿಕಾರಿಗಳ ವಿರುದ್ಧ ಗುಡುಗಿ, ಶಾಸಕರ ಮೇಲೆ ಹರಿಹಾಯ್ದ ಮಂಜು

ರೈತರ ಜಮೀನಿಗೆ ಸರ್ಕಾರದ ಜಮೀನೆಂದು ತಂತಿ ಬೇಲಿ ಹಾಕಲು ಬಂದಿದ್ದ ಅಧಿಕಾರಿಗಳನ್ನ ಮಾಜಿ ಸಚಿವ ಎ.ಮಂಜು ತರಾಟೆಗೆ ತೆಗೆದುಕೊಂಡಿದ್ದು, ಶಾಸಕ ಎ.ಟಿ.ರಾಮಸ್ವಾಮಿ ವಿರುದ್ಧವೂ ಹರಿಹಾಯ್ದಿದ್ದಾರೆ.

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಎ.ಮಂಜು

ಹಾಸನ:ರಾಜಕಾರಣಿಗಳು ಸ್ಥಾನವೂ ಶಾಸ್ವತವಲ್ಲ. ನಿಮ್ಮಂತ ಅಧಿಕಾರಿಗಳ ಹುದ್ದೆಯೂ ಶಾಶ್ವತವಲ್ಲ. ತಪ್ಪು ಮಾಡಿದವನು ಯಾರೇ ಆಗಲೀ ಅದು ತಪ್ಪೇ. ಎಂದು ಅಧಿಕಾರಿಗಳನ್ನು ಮಾಜಿ ಶಾಸಕ ಎ.ಮಂಜು ತರಾಟೆಗೆ ತೆಗುದುಕೊಂಡಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಅರಸೀಕಟ್ಟೆ ಗ್ರಾಮದಲ್ಲಿನ ತಿಮ್ಮೇಗೌಡರ ಕುಟುಂಬ 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ದೇವಾಲಯದ ಸಮೀಪವಿರುವ ಸರ್ವೆ ನಂ. 18/2 ರಲ್ಲಿರುವ 1. 22ಗುಂಟೆ ಜಮೀನು ಸರ್ಕಾರಿ ಜಮೀನೆಂದು ಅಧಿಕಾರಿಗಳು ತಂತಿ ಬೇಲಿ ಹಾಕಲು ಮುಂದಾಗಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಗುವಳಿದಾರರ ಮೇಲೆ ಅಧಿಕಾರಿಗಳು ಮಾತಿನ ಚಕಮಕಿ ಆರಂಭಿಸಿದ್ದರು.

ಇದೇ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ಎ.ಮಂಜು ವಿಚಾರವನ್ನ ತಿಳಿದುಕೊಂಡ ಬಳಿಕ ಅಧಿಕಾರಿಗಳಿಗೆ ಚಾಟಿ ಬೀಸಿ ಅವನ್ಯಾರೋ ಹೇಳಿದ ತಕ್ಷಣ ಬಂದು ತಂತಿಬೇಲಿ ಹಾಕಲು ಮುಂದಾಗಿದ್ದೀರಲ್ಲಾ ಎನ್ನುವ ಮೂಲಕ ಎ.ಟಿ.ರಾಮಸ್ವಾಮಿ ವಿರುದ್ದ ಹರಿಹಾಯ್ದಿದ್ದಾರೆ.

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಎ.ಮಂಜು

ಸರ್ಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಅಭಿವೃದ್ಧಿ ನೆಪದಲ್ಲಿ ರೈತರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರೋ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರೋ ಆ ಮನುಷ್ಯನ ಹಿಂಬಾಲಕರು ಮಠದ ಆಸ್ತಿಯನ್ನ ಅಕ್ರಮವಾಗಿ ಸಾಗುವಳಿ ಮಾಡ್ತಿದ್ದಾರಲ್ಲ ಮೊದಲು ಅದನ್ನ ತೆರವುಗೊಳಿಸಿ ಎಂದು ಅಧಿಕಾರಿಗಳ ವಿರುದ್ದವೂ ಮಂಜು ಗುಡುಗಿದ್ರು.

ವಾಸೀಂ ಪಾಷರ ಜಮೀನು ಮತ್ತು ಚಿಕ್ಕಬೊಮ್ಮನಹಳ್ಳಿ ಆದಿಚುಂಚನಗಿರಿಯ ಮಠದ ಸುಮಾರು 75 ಎಕರೆ ಭೂಮಿಯನ್ನು ಕೂಡಾ ಶಾಸಕರ ಆಪ್ತರು, ಹಿಂಬಾಲಕರು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲು ಯಾಕೆ ಮುಂದಾಗಿಲ್ಲ. ಪಾಪದ ರೈತರು ಕಣ್ಣಿಗೆ ಕಾಣುವ ನಿಮಗೆ, ಇಂತಹವರು ಮಾಡಿರುವ ಅಕ್ರಮಗಳು ಕಾಣೋದಿಲ್ವ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಚಿವ ಎ.ಮಂಜು, ನಿಮ್ಮ ಶಾಸಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ನಾನು ಸಹ ಶಾಸಕ ಮತ್ತು ಮಂತ್ರಿಯಾಗಿದ್ದೆ. ನನ್ನ ಅಧಿಕಾರದ ಅವಧಿಯಲ್ಲಿ ನಾನೆಂದು ಈ ತರಹದ ಸಣ್ಣತನದ ರಾಜಕಾರಣ ಮಾಡಲಿಲ್ಲ ಎಂದು ಕಿಡಿಕಾರಿದರು.

ABOUT THE AUTHOR

...view details