ಕರ್ನಾಟಕ

karnataka

ETV Bharat / state

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಗ್ರಹ - HD Revanna latest news

ಹೆಚ್‌ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ತೆಂಗು ಬೆಳೆಯ ನಷ್ಟಕ್ಕೆ ₹300 ಕೋಟಿ ನೀಡಿ ರೈತರನ್ನು ಕಾಪಾಡಿದ್ದರು. ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ, ದಯ ಮಾಡಿ ನಿಮ್ಮ ರಾಜಕೀಯ ಬದಿಗೊತ್ತಿ ನಮ್ಮ ರೈತರ ಪ್ರಾಣ ಉಳಿಸಿ..

ಮಾಜಿ ಸಚಿವ ಹೆಚ್.ಡಿ.ರೇವಣ್ಣ
ಮಾಜಿ ಸಚಿವ ಹೆಚ್.ಡಿ.ರೇವಣ್ಣ

By

Published : Sep 18, 2020, 3:22 PM IST

ಹಾಸನ :ಮುಖ್ಯಮಂತ್ರಿ ಬದಲಾಗುತ್ತಾರೋ ಬಿಡಿತ್ತಾರೋ ಅದು ನನಗೆ ಬೇಡದ ವಿಚಾರ. ನನಗೆ ನಮ್ಮ ಜಿಲ್ಲೆಯ ರೈತರ ಪ್ರಾಣ ಉಳಿಯಬೇಕು. ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಬೇಕು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಸರ್ಕಾರವನ್ನು ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. 96 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆದ ರೈತರ ಗೋಳು ಕೇಳದಾಗಿದೆ. ಜಿಲ್ಲೆಯ ರಸ್ತೆ ಬದಿ ಜೋಳಗಳನ್ನು ದಾಸ್ತಾನು ಮಾಡಿ ಖರೀದಿ ಮಾಡುವಂತೆ ಅಂಗಲಾಚುತ್ತಿದ್ದಾರೆ. ಸರ್ಕಾರ ₹1750 ಬೆಂಬಲ ಬೆಲೆ ಘೋಷಿಸಬೇಕು. ಇಲ್ಲವಾದ್ರೆ ರೈತರು ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಾರೆ. ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲದಾಗಿದೆ. ಡಿಸಿ ಮಾತನಾಡಿದ್ರೆ ಅವರನ್ನು 24 ಗಂಟೆಯಲ್ಲಿ ವರ್ಗಾವಣೆ ಮಾಡುತ್ತಾರೆ ಎಂಬ ಭಯ. ಹಾಗಾಗಿ ಅವರು ಮನೆ ಆಫೀಸ್, ಆಫೀಸು ಮನೆ ಎರಡಕ್ಕೆ ಸೀಮಿತವಾಗಿದ್ದಾರೆ ಅಂತಾ ವ್ಯಂಗ್ಯವಾಡಿದರು.

ಹೆಚ್‌ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ತೆಂಗು ಬೆಳೆಯ ನಷ್ಟಕ್ಕೆ ₹300 ಕೋಟಿ ನೀಡಿ ರೈತರನ್ನು ಕಾಪಾಡಿದ್ದರು. ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ, ದಯ ಮಾಡಿ ನಿಮ್ಮ ರಾಜಕೀಯ ಬದಿಗೊತ್ತಿ ನಮ್ಮ ರೈತರ ಪ್ರಾಣ ಉಳಿಸಿ. ನಿಮ್ಮ ಕೈಯಲ್ಲಿರುವ ಅಧಿಕಾರ ರೈತರಿಂದ ದೇವರು ಕೊಟ್ಟ ಭಿಕ್ಷೆ ಅವರನ್ನು ಕಾಪಾಡುವ ಮೂಲಕ ನಿಮ್ಮನ್ನು ನೀವು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವಿಧಾನಸಭಾ ಕಲಾಪ ಪ್ರಾರಂಭವಾದ ಮರುದಿನವೇ ನಾನು ರೈತರ ಪರ ದನಿ ಎತ್ತುವ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸುತ್ತೇನೆ. ರೈತರ ಪ್ರಾಣ ಇರಬೇಕು. ದಯ ಮಾಡಿ ರೈತರ ಮರಣ ಶಾಸನ ಬರೆಯುವಂತೆ ಮಾಡಬೇಡಿ. ಒಂದು ಕಡೆ ಅರ್ಚಕರ ಗೋಳು ಕೇಳದಂತಾಗಿದೆ, ದೀಪಕ್ಕೆ ಎಣ್ಣೆ ಇಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಈವರೆಗೂ ಯಾವುದೇ ಪ್ಯಾಕೇಜ್ ಕೂಡ ನೀಡಿಲ್ಲ. ಅವರುಗಳ ಕುಟುಂಬ ಕೂಡ ಬೀದಿಗೆ ಬಿದ್ದಿದೆ ಎಂದರು.

ಜಿಲ್ಲೆಯಲ್ಲಿ 10 ಲಕ್ಷ ಕುಟುಂಬಕ್ಕೆ ಕೊರೊನಾ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಡಿಸೆಂಬರ್‌ನೊಳಗೆ ಜಿಲ್ಲೆಯ ಪ್ರತಿ ಮನೆಯಲ್ಲಿಯೂ ಕೂಡ ಒಬ್ಬ ಪಾಸಿಟಿನ್ ವ್ಯಕ್ತಿ ಇರುತ್ತಾನೆ ಎಂಬ ಮುನ್ಸೂಚನೆ ಇದೆ. ಕೊರೊನಾ ಪರೀಕ್ಷೆಗೆ ಸಾವಿರಾರು ದುಡ್ಡು ಖರ್ಚು ಮಾಡಬೇಕು. ಜಿಲ್ಲೆಯ ರೈತರ ಬಳಿ ಸಾಕಷ್ಟು ಹಣ ಇಲ್ಲ. ಹಾಗಾಗಿ, ಕೆಲವರು ಪರೀಕ್ಷೆಗೊಳಪಡದೆ ಸುಮ್ಮನಾಗಿದ್ದಾರೆ. ಸರ್ಕಾರ ಇನ್ನಾದ್ರೂ ಉಚಿತವಾಗಿ ಪರೀಕ್ಷೆ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details