ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಕೋಣಗಳಿಗೆ ಅದ್ಧೂರಿ ಸ್ವಾಗತ ಕೋರಿದ ಹೆಚ್​.ಡಿ ರೇವಣ್ಣ - ​ ETV Bharat Karnataka

H.D.Revanna welcomes Kambala buffaloes in Hassan: ಬೆಂಗಳೂರು ಕಂಬಳಕ್ಕೆ ಹಾಸನ ಮಾರ್ಗವಾಗಿ ತೆರಳುತ್ತಿದ್ದ ಕೋಣಗಳಿಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸ್ವಾಗತ ಕೋರಿದರು.

ಹಾಸನದಲ್ಲಿ ಕೋಣಗಳಿಗೆ ಅದ್ಧೂರಿ ಸ್ವಾಗತ
ಹಾಸನದಲ್ಲಿ ಕೋಣಗಳಿಗೆ ಅದ್ಧೂರಿ ಸ್ವಾಗತ

By ETV Bharat Karnataka Team

Published : Nov 24, 2023, 9:07 AM IST

Updated : Nov 24, 2023, 10:00 AM IST

ಹಾಸನದಲ್ಲಿ ಕಂಬಳ ಕೋಣಗಳಿಗೆ ಅದ್ಧೂರಿ ಸ್ವಾಗತ

ಹಾಸನ :ಮೊದಲ ಬಾರಿಗೆ ರಾಜಧಾನಿಯಲ್ಲಿ ನಡೆಯುತ್ತಿರುವ ಕರಾವಳಿಯ ಬೆಂಗಳೂರು ಕಂಬಳದ ಹಿನ್ನಲೆ ಗುರುವಾರ ಉಪ್ಪಿನಂಗಡಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೋಣಗಳಿಗೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ನಗರದ ದೇವರಾಯಪಟ್ಟಣದ ಬಳಿ ವಾಹನದ ಮೂಲಕ ಆಗಮಿಸಿದ ಕೋಣಗಳನ್ನು ಭವ್ಯ ಸ್ವಾಗತ ಕೋರಿ ಬ್ಯಾಂಡ್ ಸೆಟ್ ಜೊತೆ ಮೆರವಣಿಗೆ ಮೂಲಕ ನಗರದ ಸರಕಾರಿ ಇಂಜಿನಿಯರ್ ಕಾಲೇಜು ಆವರಣಕ್ಕೆ ಕರೆ ತಂದರು.

ಪ್ರಪ್ರಥಮ ಬಾರಿಗೆ ಹಾಸನಕ್ಕೆ ಆಗಮಿಸಿರುವ ನೂರಾರು ಕೋಣಗಳ ಪ್ರದರ್ಶನ ವೀಕ್ಷಣೆ ಮಾಡಲು ಗುಂಪು ಗುಂಪಾಗಿ ಸಾರ್ವಜನಿಕರು ಆಗಮಿಸಿದರು. ಕಾರ್ಯಕ್ರಮವನ್ನು ಹೆಚ್.ಡಿ ರೇವಣ್ಣನವರು ಉದ್ಘಾಟಿಸಿ ಚಾಲನೆ ನೀಡಿದರು. ಇದೇ ವೇಳೆ ನೂರಾರು ಜನರು ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದರು.

ಕಂಬಳ ಸಮಿತಿ ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡಿ, ಕರಾವಳಿ ಭಾಗದಲ್ಲಿ ಹೆಸರುವಾಸಿಯಾಗಿರುವ ಕಂಬಳ ಕರ್ನಾಟಕದ ಕ್ರೀಡೆಯಾಗಿ ಹೊರಹೊಮ್ಮಬೇಕು ಮತ್ತು ಅಲ್ಲಿನ ಸಂಸ್ಕೃತಿ ತಿಳಿಸಬೇಕು ಎಂಬ ನಿಟ್ಟಿನಲ್ಲಿ ನವೆಂಬರ್ 25 ಮತ್ತು 26 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಕಂಬಳ ಸ್ಪರ್ಧೆ ಏರ್ಪಡಿಸಲಾಗಿದ್ದು, ತಮಿಳುನಾಡಿನ ಜಲ್ಲಿಕಟ್ಟು ರೀತಿಯಲ್ಲಿ ಕಂಬಲ ಸಹ ಎಲ್ಲೆಡೆ ಜನಪ್ರಿಯ ಆಗಬೇಕು ಎಂದರು.

ಈ ಜಾನಪದ ಕ್ರೀಡೆ ಇಡೀ ರಾಜ್ಯಕ್ಕೆ ತಿಳಿಯಬೇಕು ಎಂಬ ಸದಾಶಯದಿಂದ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. 175 ಜೋಡಿ ಕೋಣ ಇದರಲ್ಲಿ ಭಾಗಿಯಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಚಿತ್ರರಂಗದವರು ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಎರಡು ದಿನಗಳ ಸ್ಪರ್ಧೆ ನಡೆಸಲು ಬೆಂಗಳೂರು ಅರಮನೆ ಮೈದಾನದಲ್ಲಿ ಅಂಕಣ ನಿರ್ಮಿಸಲಾಗಿದ್ದು, ಇದಕ್ಕೆ ತಜ್ಞರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕರ್ನಾಟಕ ರಾಜ್ಯ ರಾಜಧಾನಿಯಲ್ಲಿರುವ ಕರಾವಳಿ ಮೂಲದ 65 ಸಂಘಟನೆಗಳು ಕಂಬಳ ಸ್ಪರ್ಧೆಗೆ ಸಾಥ್ ನೀಡಿದ್ದು, ಇಂದಿನ ಯುವಕರು ಹಾಗೂ ಎಲ್ಲಾ ಜನತೆಗೆ ಕಂಬಳದ ಬಗ್ಗೆ ಪರಿಚಯಿಸುವುದು ನಮ್ಮ ಪ್ರಮುಖ ಉದ್ದೇಶ ಎಂದು ಹೇಳಿದರು.

ಇದನ್ನೂ ಓದಿ :ಬೆಂಗಳೂರು ಕಂಬಳ: ಉಪ್ಪಿನಂಗಡಿಯಿಂದ ಹೊರಟ ಸುಮಾರು 150 ಜೋಡಿ ಕೋಣಗಳು-ವಿಡಿಯೋ

Last Updated : Nov 24, 2023, 10:00 AM IST

ABOUT THE AUTHOR

...view details