ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡ್ತಿದ್ದಾರೆ: ರೇವಣ್ಣ ಕಿಡಿ - ಚಾಕೇನಹಳ್ಳಿ ಕಟ್ಟೆ ಕಿರುಜಲಾಶಯ ಭರ್ತಿ

ಆಯಾ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡ್ತಿದ್ದಾರೆ

By

Published : Oct 9, 2019, 8:30 PM IST

ಹಾಸನ:ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಕಟ್ಟೆ ಕಿರು ಜಲಾಶಯ ಭರ್ತಿಯಾದ ಹಿನ್ನೆಲೆ ಇಂದು ತಮ್ಮ ಪತ್ನಿ ಹಾಗೂ ಜಿಲ್ಲಾ ಪಂಚಾಯತ್​ ಸದಸ್ಯೆ ಭವಾನಿ ರೇವಣ್ಣ ಹಾಗೂ ಪುತ್ರ ಲೋಕಸಭಾ ಸದಸ್ಯ ಪ್ರಜ್ವಲ್‍ರೊಂದಿಗೆ ಬಾಗಿನ ಅರ್ಪಿಸಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮಾತನಾಡಿದರು.

ಅನರ್ಹ ಶಾಸಕರು ಮತ್ತು ಬಿಜೆಪಿಯಿಂದ ಚುನಾಯಿತರಾಗಿರುವ ಕ್ಷೇತ್ರಗಳು ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ನಡೆಸಿದ್ದಾರೆ. ಕಾವೇರಿ ನದಿಗೆ ಒಳಪಡುವ ಕೆಆರ್​ಎಸ್​​, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಕೋಟಿ ರೂ.ಗಳ ಕಾಮಗಾರಿಗಳನ್ನು ಸಿಎಂ ಯಡಿಯೂರಪ್ಪ ಬೇಕೆಂದೇ ತಡೆ ಹಿಡಿದಿದ್ದಾರೆ. ಇದಕ್ಕೆ ದೇವರಿಂದಲೇ ಅವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದರು. ಮೈಸೂರು, ಮಂಡ್ಯ, ಕಬಿನಿ ವ್ಯಾಪ್ತಿಯಲ್ಲಿನ 5150 ಕೋಟಿ ರೂ.ಗಳ ಕಾಮಗಾರಿ, ಹೇಮಾವತಿ ವಿಭಾಗದಲ್ಲಿನ 1650 ಕೋಟಿ ರೂ., ತುಮಕೂರು ವಲಯದ ಕಾವೇರಿ ನಿಗಮದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿದ್ದ 500 ಕೋಟಿ ರೂ.ಗಳ ಕಾಮಗಾರಿಗೆ ಸರ್ಕಾರ ತಡೆ ನೀಡಿದೆ ಎಂದು ಆರೋಪಿಸಿದರು.

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡ್ತಿದ್ದಾರೆ: ರೇವಣ್ಣ

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನ ನಿವಾರಿಸಲು ಸರ್ಕಾರದೊಂದಿಗೆ ಚರ್ಚಿಸುವೆ. ಮನುಷ್ಯ ಮತ್ತು ಆನೆ ಸಂಘರ್ಷ ಕೊನೆಗಾಣಿಸಲು ಆನೆ ಕಾರಿಡಾರ್ ಯೋಜನೆಗೆ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿ ನಡೆಸಿದ್ದಾಗಿದೆ. ಅರಣ್ಯ ಭೂಮಿ ಒತ್ತುವರಿ ನಡೆಸಿರುವುದು ಆನೆ ದಾಳಿಗೆ ಕಾರಣ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ ಎಂದ್ರು.

ABOUT THE AUTHOR

...view details