ಕರ್ನಾಟಕ

karnataka

ETV Bharat / state

ಕಾಂಗ್ರೆಸ್​-ಬಿಜೆಪಿ ಹೊಂದಾಣಿಕೆಯೇ ಜೆಡಿಎಸ್​ ಸೋಲಿಗೆ ಕಾರಣ: ರೇವಣ್ಣ ಆರೋಪ - Ravanna press meet in Hassan

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಹೊಂದಾಣಿಕೆ ರಾಜಕೀಯ ಮಾಡಿಕೊಂಡ ಹಿನ್ನೆಲೆ ಉಪಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲುಂಟಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೂಡಾ ಈ ಎರಡೂ ಪಕ್ಷಗಳು ಹೊಂದಾಣಿಕೆ ರಾಜಕೀಯ ಮಾಡಿದ್ದವು. ರಾಜಕೀಯವಾಗಿ ಪ್ರಾದೇಶಿಕ ಪಕ್ಷವನ್ನು ತುಳಿಯಲು ಎರಡೂ ಪಕ್ಷಗಳು ಹುನ್ನಾರ ನಡೆಸುತ್ತಿವೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪಿಸಿದ್ದಾರೆ.

Former Minister HD Ravanna press meet in Hassan
ಮಾಜಿ ಸಚಿವ ಎಚ್.ಡಿ ರೇವಣ್ಣ

By

Published : Dec 12, 2019, 1:41 PM IST

ಹಾಸನ:ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹೊಂದಾಣಿಕೆ ರಾಜಕೀಯದಿಂದಾಗಿ ಮತ್ತು ಕೋಟ್ಯಂತರ ರೂ. ಹಣ ಹಂಚಿದ ಹಿನ್ನೆಲೆ ಜೆಡಿಎಸ್ ಪಕ್ಷಕ್ಕೆ ಉಪಚುನಾವಣೆಯಲ್ಲಿ ಸೋಲಾಗಿದೆ‌ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪಿಸಿದ್ದಾರೆ.

ಮಾಜಿ ಸಚಿವ ಎಚ್.ಡಿ ರೇವಣ್ಣ

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಉಪಚುನಾವಣೆಯ 15 ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷದವರು ಹಣ ಹಂಚಿದ್ದಾರೆ. ಪ್ರತಿ ಕ್ಷೇತ್ರದಲ್ಲಿ 60 ಕೋಟಿ ಹಣ ಹಂಚಿದ್ದಾರೆ, 15 ಕ್ಷೇತ್ರಕ್ಕೆ ಸರಿ ಸುಮಾರು 750 ಕೋಟಿ ರೂ ಸಾರ್ವಜನಿಕರ ತೆರಿಗೆ ಹಣ ಹಂಚಿಕೆ ಮಾಡಿರುವುದು ಜೆಡಿಎಸ್ ಪಕ್ಷ ಸೋಲಲು ಕಾರಣವಾಯಿತು ಎಂದು ದೂರಿದ್ರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಈ ಎರಡು ಪಕ್ಷಗಳು ಹೊಂದಾಣಿಕೆ ರಾಜಕೀಯ ಮಾಡಿದ್ದವು. ರಾಜಕೀಯವಾಗಿ ಪ್ರಾದೇಶಿಕ ಪಕ್ಷವನ್ನು ತುಳಿಯಲು ಎರಡು ಪಕ್ಷಗಳು ಹುನ್ನಾರ ನಡೆಸುತ್ತಿವೆ. ಇದರಲ್ಲಿ ಅವರು ಸಫಲರಾಗುವುದಿಲ್ಲ. ಬಿಜೆಪಿಯೊಂದಿಗೆ ಜೆಡಿಎಸ್ 20-20 ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿರದಿದ್ದರೆ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಅಂದು ನಡೆದ ಉಪಚುನಾವಣೆಯಲ್ಲಿ ಆರು ಸ್ಥಾನಗಳು ಗೆದ್ದಿದ್ದೆವು ಮತ್ತು 40ಕ್ಕೂ ಹೆಚ್ಚು ಸ್ಥಾನಗಳಿಂದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆ ಮಾಡಿದ್ದೆವು. ಆದರೆ ಈ ಬಾರಿ ಹಣ ಬಲದಿಂದ ಬಿಜೆಪಿ ಪಕ್ಷ ಗೆದ್ದಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆ ಫಲಿತಾಂಶ ಬಳಿಕ ಮಾತನಾಡಿದ್ದು, ಸುವರ್ಣ ಕರ್ನಾಟಕ ಅಭಿವೃದ್ಧಿ ವಿಷಯವನ್ನು ಚರ್ಚಿಸಿದ್ದಾರೆ. ಎರಡು ಪಕ್ಷಗಳ ಬೆಂಬಲವನ್ನು ಕೋರಿದ್ದಾರೆ. ಅದರಂತೆ ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ವಿಷಯದಲ್ಲಿ ನಮ್ಮ ಬೆಂಬಲವಿದೆ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ABOUT THE AUTHOR

...view details