ಹಾಸನ:ಕೋಮುವಾದಿ ಪಕ್ಷದ ವಿಷಜಂತುವಾಗಿರುವ ನರೇಂದ್ರ ಮೋದಿಯವರನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೆ, ದೇಶದ ಎಲ್ಲಾ ಜಾತ್ಯತೀತ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಮತ್ತೊಮ್ಮೆ ಮೋದಿಯ ವಿರುದ್ಧ ಶಾಸಕ ಮಾಜಿ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಗುಡುಗಿದ್ದಾರೆ.
ಕೋಮುವಾದಿ ವಿಷಜಂತು ಮೋದಿಯನ್ನು ದೇಶ ಬಿಟ್ಟೋಡಿಸಲು ಒಟ್ಟಾಗಿ: ಕೆ ಎಂ ಶಿವಲಿಂಗೇಗೌಡ
ಕೋಮುವಾದಿ ಪಕ್ಷದ ವಿಷಜಂತುವಾಗಿರುವ ನರೇಂದ್ರ ಮೋದಿಯವರನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೇ, ದೇಶದ ಎಲ್ಲಾ ಜಾತ್ಯಾತೀತ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಮತ್ತೊಮ್ಮೆ ಮೋದಿಯ ವಿರುದ್ಧ ಶಾಸಕ ಮಾಜಿ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಗುಡುಗಿದ್ದಾರೆ.
ಅರಸೀಕೆರೆಯಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೆ, ಕುಮಾರಣ್ಣನವರಿಗೆ ಮತ್ತು ಪಕ್ಷದ ಮುಖಂಡರುಗಳಿಗೆ ಹೇಳುವುದಿಷ್ಟೇ. ಕೋಮುವಾದಿ ಪಕ್ಷದ ವಿಷಜಂತುವಾಗಿರುವ ಮೋದಿಯನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೆ ದೇಶದ ಎಲ್ಲಾ ಜಾತ್ಯತೀತ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕು ಅಂತ ಮುಖಂಡರುಗಳಿಗೆ ತಾಕೀತು ಮಾಡಿದರು.
ನಾನು ಈ ಮಾತನ್ನು ಕೇವಲ ಅರಸೀಕೆರೆಯಲ್ಲಿ ಮಾತ್ರ ಹೇಳುವುದಿಲ್ಲ. ಹೈದರಾಬಾದ್ನಲ್ಲಿ ಭಾಷಣ ಮಾಡಿದ್ರು ಇದೇ ಮಾತನ್ನು ಹೇಳುತ್ತೇನೆ. ಜಾತ್ಯತೀತ ಪಕ್ಷದ ನಾವೆಲ್ಲರೂ ಒಂದೇ ಸಿದ್ಧಾಂತದಡಿ ಹೋಗಬೇಕಾಗಿದೆ. ಮೈತ್ರಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ರಾಜಕೀಯವಾಗಿ ನಾವು ದ್ವೇಷದ ಆರೋಪಗಳನ್ನು ಒಬ್ಬರ ಮೇಲೆ ಒಬ್ಬರು ಮಾಡ್ತಾ ಹೋದ್ರೆ, ಅದ್ರ ಲಾಭವನ್ನು ಕೋಮುವಾದಿ ಪಕ್ಷ ಪಡೆದುಕೊಳ್ಳುತ್ತದೆ ಎಂದರು.