ಕರ್ನಾಟಕ

karnataka

By

Published : Jan 21, 2021, 6:49 AM IST

ETV Bharat / state

ಹಾಸನದಲ್ಲಿ ಹೆಚ್ಚಿದ ಆನೆ ಹಾವಳಿ; ಕಾರ್ಯಾಚರಣೆ ಆರಂಭ

ಒಂಟಿ ಸಲಗವನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಈ ಹಿಂದೆ ರೇಡಿಯೋ ಕಾಲರ್ ಅಳವಡಿಸಿದ್ದ ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್​​​ಗಳನ್ನು ಮರು ಅಳವಡಿಸಿ ನಂತರ ಸೆರೆಹಿಡಿದ ಸ್ಥಳದಲ್ಲಿಯೇ ಬಿಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪಡೆದು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

forest officers start their work for capture of elephant
ಹಾಸನದಲ್ಲಿ ಹೆಚ್ಚಿದ ಆನೆ ಹಾವಳಿ; ಕಾರ್ಯಾಚರಣೆ ಆರಂಭ

ಹಾಸನ: ಹಾಸನ ವಿಭಾಗ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗ ಸ್ಥಳಾಂತರ ಸೇರಿದಂತೆ 3 ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಜ. 20(ನಿನ್ನೆ) ರಿಂದ ಜ. 27 ರವರೆಗೆ ನಡೆಯಲಿದೆ ಎಂದು ಡಿಎಫ್​​​​ಒ ಬಸವರಾಜ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ

ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಕೆಲವು ಜೀವಗಳು ಬಲಿಯಾಗಿವೆ. ಈ ಹಿನ್ನೆಲೆ ಆನೆಗಳನ್ನು ಸ್ಥಳಾಂತರ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ವಿವಿಧ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಮಲೆನಾಡು ಭಾಗದ ಜನರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದನ್ನರಿತ ಅರಣ್ಯಾಧಿಕಾರಿಗಳು ಉಪಟಳ ನೀಡುತ್ತಿರುವ ಆನೆಗಳನ್ನು ಹಿಡಿಯಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಪತ್ರದ ಮೂಲಕ ಕೋರಿತ್ತು.

ಒಂದು ಪುಂಡಾನೆ ಸ್ಥಳಾಂತರ ಮತ್ತು 3 ಹೆಣ್ಣಾನೆಗಳನ್ನು ಹಿಡಿದು ಅವುಗಳಿಗೆ ಕಾಲರ್ ಐಡಿ ಅಳವಡಿಸಿ ಬಿಡಬೇಕೆಂಬ ನ್ಯಾಯಾಲಯದ ಆದೇಶದ ಹಿನ್ನೆಲೆ ನಿನ್ನೆಯಿಂದ ಆನೆ ಕಾರ್ಯಾಚರಣೆ ಪ್ರಾರಂಭವಾಗಿದೆ.

ಈ ಸುದ್ದಿಯನ್ನೂ ಓದಿ:ಹೆಚ್ಚಾದ ಕಾಡಾನೆ ಹಾವಳಿ... ಭಯದ ವಾತಾವರಣದಲ್ಲಿ ಹಾಸನ ಜನತೆ

ಈಗಾಗಲೇ ಮತ್ತಿಗೋಡು ಆನೆ ಕ್ಯಾಂಪ್‌ನಿಂದ ಅಭಿಮನ್ಯು ಸೇರಿದಂತೆ ಮೂರು ಅನೆಗಳು ಜಿಲ್ಲೆಗೆ ಬಂದಿದ್ದು, ನಾಳೆಯಿಂದ ಕಾರ್ಯಾಚರಣೆ ಮಾಡಲಿವೆ. ಅಲ್ಲದೇ ಇದಕ್ಕಾಗಿ 30 ಮಂದಿ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಅಲ್ಲಿನ ರೈತರು ಮತ್ತು ಸ್ಥಳೀಯರು ಕಾರ್ಯಾಚರಣೆಯ ಸಂದರ್ಭದಲ್ಲಿ ಸಹಕರಿಸಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ABOUT THE AUTHOR

...view details