ಕರ್ನಾಟಕ

karnataka

ETV Bharat / state

ಆಚಂಗಿ-ಕುಡುಗರಹಳ್ಳಿ ಬಡಾವಣೆ ಸಮೀಪ ಕಾಣಿಸಿಕೊಂಡ ಕಾಡಾನೆ: ಆತಂಕದಲ್ಲಿ ಸಕಲೇಶಪುರ ಜನತೆ

ನಿನ್ನೆ ಸಂಜೆ ಗುಂಪಿನಿಂದ ಬೇರ್ಪಟ್ಟ ಆನೆಯೊಂದು‌ ಪಟ್ಟಣದ ಆಚಂಗಿ, ಕುಡುಗರಹಳ್ಳಿ ಬಡಾವಣೆಗಳ ಸಮೀಪ ಸಂಚರಿಸಿ ಸ್ಥಳೀಯ ನಿವಾಸಿಗಳಲ್ಲಿ ಭಯ ಮೂಡಿಸಿದೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಧ್ವನಿವರ್ಧಕಗಳ ಮೂಲಕ ಆಚಂಗಿ, ಕುಡುಗರಹಳ್ಳಿ, ಅಗ್ರಹಾರ ನಿವಾಸಿಗಳನ್ನು ಎಚ್ಚರಿಸಿ ಮನೆಯಿಂದ ಹೊರ ಬರದಂತೆ ಕ್ರಮ ವಹಿಸಿದರು.

Forest elephants in Sakaleshapura
ಆಚಂಗಿ, ಕುಡುಗರಹಳ್ಳಿ ಬಡಾವಣೆ ಸಮೀಪ ಕಾಣಿಸಿಕೊಂಡ ಕಾಡಾನೆ: ಆತಂಕದಲ್ಲಿ ಸಕಲೇಶಪುರ ಜನತೆ

By

Published : May 30, 2020, 11:31 AM IST

ಸಕಲೇಶಪುರ: ಕಾಡಾನೆಯೊಂದು ಪಟ್ಟಣದ ಒಳಗೆ ಪ್ರವೇಶಿಸಿ ಜನರಲ್ಲಿ ಭೀತಿ ಹುಟ್ಟಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ.

ಕಳೆದ ಹಲವಾರು ವರ್ಷಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಪಟಳ ನೀಡಿ ಗ್ರಾಮಸ್ಥರ ಹಾಗೂ ಬೆಳಗಾರರ ನೆಮ್ಮದಿ ಕೆಡಿಸಿರುವ ಕಾಡಾನೆಗಳು, ಇದೀಗ ಪಟ್ಡಣದತ್ತ ಲಗ್ಗೆ ಇಡುತ್ತಿವೆ. ಶುಕ್ರವಾರ ಸಂಜೆ ಗುಂಪಿನಿಂದ ಬೇರ್ಪಟ್ಟ ಆನೆಯೊಂದು‌ ಪಟ್ಟಣದ ಆಚಂಗಿ, ಕುಡುಗರಹಳ್ಳಿ ಬಡಾವಣೆಗಳ ಸಮೀಪ ಸಂಚರಿಸಿ ಸ್ಥಳೀಯ ನಿವಾಸಿಗಳಲ್ಲಿ ಭಯ ಮೂಡಿಸಿದೆ. ಸಂಜೆಯ ಸಮಯವಾದ ಕಾರಣ ಬಹುತೇಕ ನಿವಾಸಿಗಳು ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗುವ ವೇಳೆಯಲ್ಲಿ ಏಕಾಏಕಿ ಬಂದ ಕಾಡಾನೆಯನ್ನು ಕಂಡು ಭಯಗೊಂಡ ಕೆಲವರು ತಮಗೆ ಸಿಕ್ಕ ಮನೆಯೊಳಗೆ ನುಗ್ಗಿ ತಮ್ಮ ಜೀವಗಳನ್ನು ರಕ್ಷಿಸಿಕೊಂಡಿದ್ದಾರೆ.

ಕಾಡಾನೆ ಹಾವಳಿ

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಆಚಂಗಿ, ಕುಡುಗರಹಳ್ಳಿ, ಅಗ್ರಹಾರ ನಿವಾಸಿಗಳನ್ನು ಎಚ್ಚರಿಸಿ ಮನೆಯಿಂದ ಹೊರ ಬರದಂತೆ ಕ್ರಮ ವಹಿಸಿದರು. ಕಾಡಾನೆ ಸಮಸ್ಯೆ ತಾಲೂಕಿನಲ್ಲಿ ಮಿತಿ ಮೀರಿದ್ದು, ಆನೆಗಳು ಎಲ್ಲೆಂದರಲ್ಲಿ ತಿರುಗಾಡುತ್ತಿರುವುದು ತಾಲೂಕಿನ ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details