ಹಾಸನ:ಸಿದ್ದಗಂಗಾ ಮಠ, ತುಮಕೂರಿನ ಸೌಹಾರ್ದ ಪತ್ತಿನ ಸಹಕಾರ ನಿಯಮಿತಿ ಮತ್ತು ಸ್ನೇಹಿತರ ಸಹಕಾರದಲ್ಲಿ ಇತ್ತಿಚಿಗೆ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ನೆರವಿಗಾಗಿ ದಿನನಿತ್ಯ ಬಳಸುವ ಕುಕ್ಕರ್, ಇತರೆ ಪದಾರ್ಥ ಹಾಗೂ ಆರ್ಥಿಕ ಸಹಕಾರವನ್ನು ಜಿಲ್ಲಾಧಿಕಾರಿ ಅಕ್ರಂಪಾಷ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ ಎದುರು ಹಸ್ತಾಂತರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಅಕ್ರಂಪಾಷ ಸುದ್ದಿಗಾರರೊಂದಿಗೆ ಮಾತನಾಡಿ, ವಿವಿಧ ಸಂಘ-ಸಂಸ್ಥೆಯಿಂದ ಹಲವಾರು ರೀತಿ ಸಹಾಯಸ್ತ ಹರಿದು ಬರುತ್ತಿದೆ. ಜೊತೆಗೆ ಹಲವಾರು ಸಹಕಾರಿ ಸಂಘಗಳು, ಮಠಗಳು, ನಾಗರಿಕರು ಎಲ್ಲಾ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದಾರೆ. ಅಗತ್ಯವಾಗಿ ಬೇಕಾಗಿರುವ ಅಕ್ಕಿ, ಬೆಳೆ, ಪಾತ್ರೆ, ಸೇರಿದಂತೆ ದೈನಂದಿನ ವಸ್ತುಗಳ ಎಲ್ಲಾ ಕಿಟ್ಟುಗಳನ್ನು ಎಲ್ಲರ ಸಹಕಾರದಲ್ಲಿ ಕೊಡಲಾಗಿದೆ ಎಂದರು.