ಹಾಸನ: ನಗರದ ಹೊರವಲಯದ ಗುಡ್ಡೇನಹಳ್ಳಿ ಗ್ರಾಮದ ದೇವರಾಜು ಎಂಬುವವರ ಮನೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಮಾಡಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಹಾಸನ: ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ - Food poison in guddenahalli in hassan
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ: ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ನಿನ್ನೆ ಹಾಸನದ ಹೊರವಲಯದ ಗುಡ್ಡೇನಹಳ್ಳಿ ಗ್ರಾಮದ ದೇವರಾಜು ಎಂಬುವವರ ಮನೆಯ ಗೃಹಪ್ರವೇಶವಿತ್ತು. ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಊಟ ಮಾಡಿದ ಕೆಲವೇ ಗಂಟೆಗಳಲ್ಲಿ 50ಕ್ಕೂ ಹೆಚ್ಚು ಮಂದಿಗೆ ಅನಾರೋಗ್ಯ ಉಂಟಾಗಿದೆ.
ಕೂಡಲೇ ಅಸ್ವಸ್ಥರನ್ನು ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸದ್ಯ ಆರೋಗ್ಯ ಅಧಿಕಾರಿಗಳು, ಕಾರ್ಯಕ್ರಮಕ್ಕೆ ಮಾಡಿದ ಆಹಾರ ಮಾದರಿಯನ್ನು ಪಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಇನ್ನು ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಹಾಸನ ಗೃಹ ಪ್ರವೇಶ ದುರ್ಘಟನೆ